ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಲೇಜು ಗ್ರೌಂಡ್ ನಲ್ಲಿ ಮೀನು ಹಿಡತ್ರವೇ ಕಾಲೇಜ್ ಕ್ರೀಡಾಪಟುಗಳು: ಯಾಕ್ ಗೊತ್ತ ?

ಬಾಗಲಕೋಟೆ: ಇಲ್ಲಿಯ ಕಾಲೇಜು ಮೈದಾನದಲ್ಲಿ ಮೀನು ಹಿಡಿಯುತ್ತಿರೋ ವಿದ್ಯಾರ್ಥಿಗಳು. ಮೀನು ಹಿಡಿಯೋಕು ಇದೆ ಒಂದು ಕಾರಣ. ಕಾಲೇಜು ಮೈದಾನದಲ್ಲಿ ಮೀನು ಹಿಡಿಯುವುದೇ ? ಹೌದು.ಇಳಕಲ್ ನಗರದ ಎಸ್.ವಿ.ಎಂ ಕಾಲೇಜಿನ ವೀರಮಣಿ ಕ್ರೀಡಾಂಗಣ ಸತತ ಸುರಿದ ಭಾರಿ ಮಳೆಗೆ ಕೆರೆಯಂತಾಗಿದೆ. ಈ ಸಮಸ್ಯೆಗೆ ಯಾರೂ ಸ್ಪಂದಿಸುತ್ತಲೇ ಇಲ್ಲ. ಹಂಗಾಗಿಯೆ ಇಲ್ಲಿಯ ವಿದ್ಯಾರ್ಥಿಗಳು ನಿಂತ ನೀರಲ್ಲಿ ಮೀನು ಹಿಡಿಯೋ ಥರ ಅಣಕು ಪ್ರದರ್ಶನ ಮಾಡಿ ಸಮಸ್ಯೆ ಮೇಲೆ ಬೆಳಕು ಚೆಲ್ಲೋ ಕೆಲಸ ಮಾಡಿದ್ದಾರೆ ನೋಡಿ..

ಇಳಕಲ್ ನಗರದ ಎಸ್.ವಿ.ಎಂ.ಕಾಲೇಜಿನ ವೀರಮಣಿ ಮೈದಾನದಲ್ಲಿ ಮಳೆ ಆದರೆ ಮುಗಿದೇ ಹೋಯಿತು. ಕ್ರೀಡಾಂಗಣದ ರೂಪವೇ ಬದಲಾಗುತ್ತದೆ. ಅಲ್ಲಿ ಇಲ್ಲಿ ಎಲ್ಲೆಡೆ ಹೀಗೆ ಗುಂಡಿಗಳಲ್ಲಿ ನೀರು ನಿಂತು ಬಿಡುತ್ತದೆ. ಇದರಿಂದ ಕ್ರೀಡಾಪಟುಗಳಿಗೆ ತೊಂದರೆನೂ ಆಗುತ್ತದೆ. ಆದರೆ ಈ ಸಮಸ್ಯೆಗೆ ಇಲ್ಲಿವರೆಗೂ ಯಾರೂ ಸ್ಪಂದಿಸಿಯೇ ಇಲ್ಲ.ಕಾಲೇಜು ಆಡಳಿತ ಮಂಡಿಯಂತೂ ಮೌನವಾಗಿಯೇ ಇದೆ. ಯಾವುದೇ ಮನವಿಯನ್ನೂ ಕಿವಿಗೆ ಹಾಕಿಕೊಂಡೇ ಇಲ್ಲ.

ಅದಕ್ಕೇನೆ ಈಗ ಕಾಲೇಜಿನ ಕ್ರೀಡಾಸಕ್ತ ವಿದ್ಯಾರ್ಥಿಗಳು ಮೈದಾನದಲ್ಲಿ ನಿಂತ ನೀರಿನಲ್ಲಿ ಮೀನು ಹಿಡಿಯೋ ಥರವೇ ಅಣಕು ಪ್ರದರ್ಶನ ಮಾಡಿದ್ದಾರೆ. ಇದರಿಂದಲಾದರೂ ಸಮಸ್ಯೆಗೆ ಪರಿಹಾರ ಸಿಗಲಿ ಎಂಬೋದೇ ಈ ಒಟ್ಟು ಅಣಕು ಪ್ರದರ್ಶನದ ಉದ್ದೇಶ. ಇದನ್ನ ನೋಡಿಯಾದರೂ ಕಾಲೇಜು ಆಡಳಿತ ಮಂಡಳಿ ಎಚ್ಚೆತ್ತುಕೊಳ್ಳುತ್ತದೆಯೇ ನೋಡಬೇಕು.

Edited By : Shivu K
PublicNext

PublicNext

27/10/2021 05:36 pm

Cinque Terre

43.33 K

Cinque Terre

3