ಐಟಿ ಉದ್ಯೋಗಿಗಳಿಗೆ ಮಾತ್ರ 2 ದಿನ ರಜೆ ಬಿಟ್ರೆ ಉಳಿದೆಲ್ಲಾ ವಲಯಗಳಲ್ಲೂ ಇಂದಿಗೂ ಭಾನುವಾರ ಒಂದೇ ದಿನ ವಾರದ ರಜೆಯಿದೆ.
ಸದ್ಯ ಭಾರತೀಯ ಐಟಿ ವಲಯದಲ್ಲಿ ಕೆಲಸ ಮಾಡುವ ವೃತ್ತಿಪರರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಈ ಕಂಪನಿಯಲ್ಲಿ ಕೆಲಸ ಮಾಡುವರು ಇನ್ಮುಂದೆ ಲಾಂಗ್ ವೀಕೆಂಡ್ ಎಂಜಾಯ್ ಮಾಡಬಹುದು. ವಾರದಲ್ಲಿ ಬರೋಬ್ಬರಿ 3 ದಿನಗಳ ಕಾಲ ರಜೆ ನೀಡಲಾಗುವುದು.
ಹೌದು ಸೈಬರ್ ಸೆಕ್ಯುರಿಟಿ ಕಂಪನಿ TAC ಸೆಕ್ಯುರಿಟಿ (cybersecurity company TAC Security )ಇನ್ಮುಂದೆ ತನ್ನ ಉದ್ಯೋಗಿಗಳಿಗೆ ವಾರದಲ್ಲಿ 4 ದಿನ ಕೆಲಸ, 3 ದಿನ ರಜೆಯನ್ನು ಘೋಷಿಸಿದೆ.
ಟಿಎಸಿ ಸೆಕ್ಯುರಿಟಿ ಕಳೆದ ಏಳು ತಿಂಗಳುಗಳಿಂದ ಶುಕ್ರವಾರದಂದು ತನ್ನ ಮುಂಬೈ ಕಚೇರಿಯನ್ನು ಮುಚ್ಚುತ್ತಿದೆ. ತನ್ನ ಉದ್ಯೋಗಿಗಳಿಗೆ ದೀರ್ಘ ವಾರಾಂತ್ಯವನ್ನು ಆನಂದಿಸಲು ಅವಕಾಶ ಮಾಡಿ ಕೊಟ್ಟಿದೆ. ಇದು ಉತ್ತಮ ಉತ್ಪಾದಕತೆಗೆ ಕಾರಣವಾಗಿದೆ ಎಂದು ಐಟಿ ಕಂಪನಿ ಹೇಳಿಕೊಂಡಿದೆ.
3 ದಿನಗಳ ಕಾಲ ರಜೆ ನೀಡುವುದು ಕಾರ್ಮಿಕರನ್ನು ಸಂತೋಷವಾಗಿ ಇಟ್ಟಿದೆಯಂತೆ. ಹೆಚ್ಚು ಕೆಲಸ ಮಾಡಲು ಪ್ರೇರೇಪಿಸಿದೆಯಂತೆ. ಈ ಹಿನ್ನೆಲೆಯಲ್ಲಿ ಮುಂಬೈ ಕಚೇರಿಯಲ್ಲಿ 3 ದಿನ ರಜೆ ಪದ್ಧತಿಯನ್ನು ಶಾಶ್ವತವಾಗಿಸುವ ಬಗ್ಗೆ ಕಂಪನಿ ಅಭಿಪ್ರಾಯಪಟ್ಟಿದೆ. TAC ಸೆಕ್ಯುರಿಟಿ ಆಂತರಿಕ ಸಮೀಕ್ಷೆಯನ್ನು ನಡೆಸಿದೆ. ತಂಡದಲ್ಲಿ 80% ಉದ್ಯೋಗಿಗಳು ವಾರದ ನಾಲ್ಕು ದಿನಗಳು ದೀರ್ಘಾವಧಿಯವರೆಗೆ ಕೆಲಸ ಮಾಡಲು ಸಿದ್ಧವಾಗಿದ್ದಾರೆ.
PublicNext
28/09/2021 06:12 pm