ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ: ಕೇಳುವವರಿಲ್ಲದ ಎಪಿಎಂಸಿ ವಸತಿ ಗೃಹಗಳು.

ಚಿತ್ರದುರ್ಗ: 1998 ರಲ್ಲಿ ನಿರ್ಮಾಣವಾದ ಕೃಷಿ ಮಾರುಕಟ್ಟೆಯ ವಸತಿ ಗೃಹಗಳನ್ನು ಯಾರು ಕೇಳುವವರು ಗತಿ ಇಲ್ಲಾದಂತಾಗಿದೆ. ಹಿರಿಯೂರು ನಗರದ ಕೃಷಿ ಮಾರುಕಟ್ಟೆ ಆವರಣದಲ್ಲಿ 1998 ರಲ್ಲಿ ಪ್ರಾರಂಭವಾದ ಕೃಷಿ ಮಾರುಕಟ್ಟೆ ವಸತಿ ಗೃಹಗಳು ಶಿಥಿಲವ್ಯವಸ್ಥೆ ತಲುಪಿದ್ದು ವಿನಾಶದತ್ತ ಸಾಗುತ್ತಿದೆ. ಮತ್ತೆರಡು ಗೃಹಗಳು ಬಳಕೆಯಾಗದೆ ಹಾಗೆ ಉಳಿದಿದ್ದು ಯಾರು ಕೇಳುವವರಿಲ್ಲ ಅನ್ನುವಂತಾಗಿದೆ. ಮೊದಲನೇ ವಸತಿ ಗೃಹಗಳು ದಿವಂಗತ ಮಾಜಿ ಸಚಿವ ಡಿ. ಮಂಜುನಾಥ್ ಅವರ ಕಾಲದಲ್ಲಿ ಉದ್ಘಾಟನೆಯಾಗಿದ್ದು, ಒಂದೆರಡು ವರ್ಷಗಳ ಕಾಲ ಮಾತ್ರ ಬಳಕೆ ಮಾಡಲಾಗಿತ್ತು ಎಂದು ತಿಳಿದೆ.

ಅಲ್ಲಿಂದ ಇಲ್ಲಿಯವರೆಗೆ ಸುಮಾರು 20 ವರ್ಷ ಕಳೆದರೂ ಯಾರು ಕೂಡ ಸಿಬ್ಬಂದಿಗಳು ಬಳಸಿಕೊಳ್ಳಲು ಮುಂದೆ ಬರುತ್ತಿಲ್ಲ. 2014 ರಲ್ಲಿ ಮತ್ತೆರಡು ಹೊಸದಾಗಿ ಸಿಬ್ಬಂದಿ ವಸತಿ ಗೃಹಗಳನ್ನು ಸುಮಾರು 15 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ್ದು, ಅವುಗಳು ಸಹ ಬಳಕೆ ಯಾರು ಕೇಳುವವರಿಲ್ಲಂತಾಗಿದೆ. ವಿಪರ್ಯಾಸವೆಂದರೆ ದಿವಂಗತ ಮಾಜಿ ಸಚಿವ ಡಿ. ಮಂಜುನಾಥ್ ಅವರು ನಿಧನ ಹೊಂದಿದರು ವಸತಿ ಗೃಹಗಳು ಮಾತ್ರ ಬಳಕೆಯಾಗದೆ ಹಾಗೆ ಉಳಿದಿವೆ. ನಮ್ಮ ಇಲಾಖೆಯಲ್ಲಿ 3 ಜನ ಸಿಬ್ಬಂದಿಗಳು ಮಾತ್ರ ಇದ್ದಾರೆ. ಅವರಿಗೆ ಸ್ವಂತ ಮನೆಗಳಿವೆ. ಆಗಾಗಿ ಬೇರೆ ಯಾವುದೇ ಸರ್ಕಾರಿ ಇಲಾಖೆಯವರು ಬಂದು ಕೇಳಿದರೆ ನಾವು ಅವುಗಳನ್ನು ಬಾಡಿಗೆ ನೀಡುತ್ತವೆ ಎನ್ನುತ್ತಾರೆ ಕಾರ್ಯದರ್ಶಿ ತಿಪ್ಪೇಸ್ವಾಮಿ.

ನಮ್ಮ ಹಿರಿಯೂರು ತಾಲ್ಲೂಕಿನ ಕೃಷಿ ಮಾರುಕಟ್ಟೆ ಆವರಣದಲ್ಲಿ ಮೂರು ವಸತಿ ಗೃಹಗಳನ್ನು ನಿರ್ಮಾಣ ಮಾಡಿ ಸುಮಾರು ವರ್ಷಗಳು ಕಳೆದರೂ ಬಳಕೆಯಾಗುತ್ತಿಲ್ಲ. ಸಂಬಂಧ ಪಟ್ಟ ಅಧಿಕಾರಿಗಳು ಗಮನ ಹರಿಸಬೇಕು ಬೇರೆ ಇಲಾಖೆಯ ಸಿಬ್ಬಂದಿಗಳಿಗೆ ಕೊಡಬೇಕು ಎಂದು ರೈತ ಸಂಘದ ಅಧ್ಯಕ್ಷ ಕೆ.ಟಿ. ತಿಪ್ಪೇಸ್ವಾಮಿ ಆಗ್ರಹಿಸಿದ್ದಾರೆ.

ಒಟ್ಟಾರೆಯಾಗಿ ಎಪಿಎಂಸಿ ಸಿಬ್ಬಂದಿ ವಸತಿ ಗೃಹಗಳನ್ನು ನಿರ್ಮಾಣ ಮಾಡಿ ಸುಮಾರು ವರ್ಷಗಳೇ ಕಳೆದರೂ ಬಳಕೆಯಾಗದೆ ಕುಡುಕರ ಅನೈತಿಕ ಚಟುವಟಿಕೆ ತಾಣಗಳಾಗಿ ಮಾರ್ಪಾಡು ಆಗುತ್ತಿದ್ದು, ಸಂಬಂಧ ಪಟ್ಟ ಅಧಿಕಾರಿಗಳು ಮುಂದಿನ ಯಾವ ಕ್ರಮ ಕೈಗೊಳ್ಳುತ್ತಾರೆ ಕಾದು ನೋಡಬೇಕಿದೆ.

ವರದಿ ಪಬ್ಲಿಕ್ ನೆಕ್ಸ್ಟ್ ಪ್ರತಿನಿಧಿ ಚಿತ್ರದುರ್ಗ

Edited By : Manjunath H D
PublicNext

PublicNext

31/07/2021 06:01 pm

Cinque Terre

116.82 K

Cinque Terre

0