ನವದೆಹಲಿ: ಎಷ್ಟೇ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಂಡರು ಜನ ಮಾತ್ರ ರೂಲ್ಸ್ ಬ್ರೇಕ್ ಮಾಡುವುದನ್ನು ನಿಲ್ಲಿಸುತ್ತಿಲ್ಲ ಮುಖ್ಯವಾಗಿ ಟ್ರಾಫಿಕ್ ರೂಲ್ಸ್ ಆದರೆ ಈ ಕಾನೂನು ಜಾರಿ ಆದ್ರೆ ಯಾರು ನಿಯಮ ಉಲ್ಲಂಘಿಸಲು ಸಾಧ್ಯವೇಇಲ್ಲ.
ಭಾರತೀಯ ವಿಮಾ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರ (ಐಆರ್ಡಿಎಐ) ಟ್ರಾಫಿಕ್ ರೂಲ್ಸ್ ಉಲ್ಲಂಘಿಸುವುದನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಇದು ಪ್ರತ್ಯೇಕ ವಿಮಾ ಪ್ರೀಮಿಯಂ ಅಳವಡಿಸುವ ಬಗ್ಗೆ ಪ್ರಸ್ತಾವನೆ ಇರಿಸಿದೆ. ಅದಕ್ಕಾಗಿ ಟ್ರಾಫಿಕ್ ಉಲ್ಲಂಘನೆ ಪ್ರಕರಣಗಳನ್ನು ಮೋಟಾರ್ ಇನ್ಶೂರೆನ್ಸ್ ಪ್ರೀಮಿಯಂ ಜತೆ ಲಿಂಕ್ ಮಾಡುವ ಸಲಹೆಯನ್ನು ನೀಡಿದೆ.
ಇದಕ್ಕೆ ಟ್ರಾಫಿಕ್ ವಯೊಲೇಷನ್ ಪ್ರೀಮಿಯಂ (ಟಿವಿಪಿ) ಎಂದು ಹೆಸರಿಡಲಾಗಿದ್ದು, ಈಗಾಗಲೇ ಇರುವ ಓನ್ ಡ್ಯಾಮೇಜ್ ಇನ್ಶೂರೆನ್ಸ್, ಥರ್ಡ್ ಪಾರ್ಟಿ ಇನ್ಶೂರೆನ್ಸ್, ಅಡಿಷನಲ್ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಹಾಗೂ ಕಂಪಲ್ಸರಿ ಪರ್ಸನಲ್ ಆಯಕ್ಸಿಡೆಂಟ್ ಪ್ರೀಮಿಯಂ ಜತೆ ಇದನ್ನೂ ಸೇರಿಸುವಂತೆ ಪ್ರಸ್ತಾವನೆ ಇಡಲಾಗಿದೆ.
ಈ ಟಿವಿಪಿ ಹೊಸ ವಾಹನಗಳಿಗೆ ಅನ್ವಯಿಸುವುದಿಲ್ಲ. ಆದರೆ ಆ ಬಳಿಕದ ನವೀಕರಣ ವೇಳೆ ಅನ್ವಯಿಸುತ್ತದೆ. ಅಂದರೆ ಮುಂದೆ ಕಳೆದ ಎರಡು ವರ್ಷಗಳಲ್ಲಿ ಎಷ್ಟು ಸಲ ಟ್ರಾಫಿಕ್ ರೂಲ್ಸ್ ಉಲ್ಲಂಘಿಸಲಾಗಿದೆ ಎಂಬುದರ ಮೇಲೆ ಇದರ ಪ್ರೀಮಿಯಂ ನಿರ್ಧರಿಸಲಾಗುತ್ತದೆ.
ಆ ಮೂಲಕ ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳ ಮಾಲೀಕರಿಗೆ ದಂಡ ಹಾಕುವ ಪ್ರಮಾಣವನ್ನು ನಿರ್ಧರಿಸಲಾಗುತ್ತದೆ. ಭವಿಷ್ಯದಲ್ಲಿ ವಾಹನ ಮಾಲೀಕರು ಜನರಲ್ ಇನ್ಶೂರೆನ್ಸ್ ಕ್ಲೇಮ್ ಮಾಡಿಕೊಳ್ಳುವಾಗ ಈ ಟಿವಿಪಿಯನ್ನೂ ಪರಿಗಣಿಸಲಾಗುವುದು. ಇಂಥದ್ದೊಂದು ಕರಡು ಸದ್ಯ ಸಲ್ಲಿಕೆಯಾಗಿದ್ದು, ಪರಿಶೀಲನೆಯಲ್ಲಿದೆ.
PublicNext
19/01/2021 11:00 pm