ಗದಗ : ಗದಗ ಜಿಲ್ಲೆಯ ಬೆಟಗೇರಿ ಬಳಿಯ ನರಸಾಪುರ ನೇಕಾರ ಕಾಲೋನಿಯಲ್ಲಿರುವ ಸುಮಾರು 150 ಜನ ನೇಕಾರರು ಐದಾರು ವರ್ಷದಿಂದ ತಮಗೆ ಬರಬೇಕಿದ್ದ ಹಣ ಬಂದಿಲ್ಲ ಎಂದು ಕಣ್ಣೀರು ಹಾಕುತ್ತಿದ್ದಾರೆ.
ಗದಗ ಜಿಲ್ಲೆಯಲ್ಲಿರೋ 262 ನೇಕಾರರಿಂದ ಪಿಎಫ್ ಮಾದರಿಯಲ್ಲಿ ಸರ್ಕಾರ ತ್ರಿಫ್ಟ್ ಫಂಡ್ (thrift) ಮಿತವ್ಯಯ ನಿಧಿ ಸಂಗ್ರಹಿಸಿದೆ. ನೇಕಾರರಿಂದ ಸಂಗ್ರಹವಾದ 8 % ನಿಧಿಗೆ ರಾಜ್ಯ 4%, ಕೇಂದ್ರ ಸರ್ಕಾರದಿಂದ ಸಂಗ್ರಹವಾದ 4 % ಹಣವನ್ನ ಸೇರಿಸಲಾಗುತ್ತೆ. 15 ವರ್ಷದ ನಂತರ ಸಂಗ್ರಹವಾದ ಹಣದ ಜೊತೆಗೆ ಸರ್ಕಾರದ ಹಣ ಸೇರಿಸಿ ಬಡ್ಡಿ ಸಮೇತ ನೇಕಾರರರಿಗೆ ತಲುಪಿಸಲಾಗುತ್ತೆ. ನೇಕಾರರ ಭವಿಷ್ಯದಲ್ಲಿ ಹಣ ಯೂಸ್ ಆಗ್ಲಿ ಎನ್ನುವ ಉದ್ದೇಶದಿಂದ ಫಂಡ್ ಸಂಗ್ರಹವಾಗುತ್ತೆ.
1989 ರಿಂದ ತ್ರಿಫ್ಟ್ ಫಂಡ ಯೋಜನೆ ಜಾರಿಯಲ್ಲಿದೆ. ಆಗ್ಲಿಂದ್ಲೂ ಕೈ ಮಗ್ಗ ಅಭಿವೃದ್ಧಿ ನಿಗಮ, ನೇಕಾರರಿಂದ ಹಣ ಸಂಗ್ರಹಿಸಿ ಸರ್ಕಾರಕ್ಕೆ ಜಮೆ ಮಾಡಿದೆ. ಈವರೆಗೆ ಗದಗ ಜಿಲ್ಲೆಯಿಂದ ಸುಮಾರು 43 ಲಕ್ಷ ರೂಪಾಯಿ ಹಣ ಜಮೆಯಾಗಿದ್ಯಂತೆ. ಈಗ ನೇಕಾರರಿಗೆ ಹಣ ನೀಡ್ಬೇಕು ಆದ್ರೆ, ಹಣ ಮಾತ್ರ ನೇಕಾರರು ಕೈ ಸೇರಿಲ್ಲ.
ದುಡಿದ ಹಣವನ್ನೇ ಸರ್ಕಾರ ಬಿಡುಗಡೆ ಮಾಡ್ತಿಲ್ಲ.. ಆರೋಗ್ಯ ಸಮಸ್ಯೆ, ದಿನ ನಿತ್ಯದ ಖರ್ಚು ವೆಚ್ಚ ನಿಭಾಯಿಸಲಾಗದೇ ನೇಕಾರರು ಕಂಗಾಲಾಗಿದಾರೆ. ಇನ್ನು ಕೂಲಿಯೂ ಅಷ್ಟಾಗಿ ಸಿಗ್ತಿಲ್ಲ. ಹೀಗಾಗಿ ನೇಕಾರ ವೃತ್ತಿ ಬಿಟ್ಟು ಹೋಟೆಲ್ ಸಫಾಯಿ ಕೆಲಸಕ್ಕೆ ಕೆಲ ನೇಕಾರರು ಸೇರಿಕೊಂಡಿದ್ದಾರೆ.
ಸದ್ಯ ಜೀವನ ನಿರ್ವಹಣೆಗೆ ಹಣ ಕೂಲಿ ಹೆಚ್ಚು ಮಾಡಿ ಅಂತಾ ನೇಕಾರರು ಕೇಳುತ್ತಿದ್ದಾರೆ. ಮನೆ ನಿರ್ಮಾಣಕ್ಕೆ ಸಹಾಯ ಮಾಡಿ ಅಂತಾನೂ ನೇಕಾರರ ಬೇಡಿಕೆಯಾಗಿದೆ ಎಲ್ಲದಕ್ಕೂ ಮೊದಲು ಕೈ ಮಗ್ಗ ನೇಕಾರರು ದುಡಿದ ಹಣ ಅವರ ಕೈ ಸೇರುವಂತಾಗಬೇಕು. ತ್ರಿಫ್ಟ್ ಫಂಡ ರಿಲೀಸ್ ಮಾಡುವ ಮೂಲಕ ರೋಸಿ ಹೋಗಿರುವ ನೇಕಾರ ನೆರವಿಗೆ ಸರ್ಕಾರ ನಿಲ್ಲಬೇಕಿದೆ.
PublicNext
10/08/2022 04:45 pm