ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ತೆಪ್ಪದಲ್ಲಿ ಸ್ಕೂಟಿ ಹೊತ್ತೊಯ್ಯುತ್ತಿರುವ ಜನ.!

ಹಾವೇರಿ: ಜಿಲ್ಲೆಯಾದ್ಯಂತ ವರದಾ ನದಿಯು ಮೈದುಂಬಿ ಹರಿಯುತ್ತಿದೆ. ಹಾವೇರಿ ಜಿಲ್ಲೆಯ ಬೆಳವಗಿಯಿಂದ ನೀರಲಗಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ತುಂಬಿದ ವರದಾ ನದಿಯಲ್ಲಿ ಜನರ ಹುಚ್ಚಾಟ ನಡೆಸಿದ್ದಾರೆ. ಇನ್ನು ಕೆಲವರು ಸ್ಕೂಟಿಯನ್ನು ತೆಪ್ಪದಲ್ಲಿ ಕೊಂಡೊಯ್ಯುತ್ತಿದ್ದಾರೆ.

ಬೆಳವಗಿ-ನೀರಲಗಿ ಸೇತುವೆ ಮಧ್ಯ ಜನರ ಹುಚ್ಚಾಟ ಕಂಡು ಅಲ್ಲಿನ ಗ್ರಾಮಸ್ಥರು ಸ್ವಲ್ಪ ಯಾಮಾರಿದರೂ ನಿಮ್ಮ ಪ್ರಾಣವೇ ಹೋಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆದರೂ ಕೂಡ ಹುಚ್ಚು ಧೈರ್ಯ ಮಾಡಿ ತುಂಬಿದ ನದಿಯನ್ನ ದಾಟುತ್ತಿದ್ದಾರೆ. ಅಪಾಯದ ಮಟ್ಟ ಮೀರಿ ವರದಾ ನದಿ ಹರಿಯುತ್ತಿದೆ. ಹುಲಗಂದಿ, ನೀರಲಗಿ, ಮೇಹುಂಡಿ, ತೆರದಳ್ಳಿ ಗ್ರಾಮದಲ್ಲಿ ವರದಾ ನದಿಯಿಂದ ಜನರು ಹೈರಾಣಾಗಿದ್ದಾರೆ. ಹೊಳಿ ಇಟಿಗೆ ಮುಖ್ಯ ರಸ್ತೆ ತಲುಪಲು ಜನರ ಪರದಾಡುತ್ತಿದ್ದಾರೆ. ನದಿಯ ಅಕ್ಕ ಪಕ್ಕದ ಜಮೀನುಗಳು ಜಲಾವೃತಗೊಂಡಿವೆ.

Edited By : Nagesh Gaonkar
PublicNext

PublicNext

17/07/2022 05:03 pm

Cinque Terre

39.59 K

Cinque Terre

0

ಸಂಬಂಧಿತ ಸುದ್ದಿ