ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಬುರಗಿ: ಮಳೆಗೆ ತೋಯಿದು ಹೋದ ತಾತ್ಕಾಲಿಕ ಶೆಡ್; ರಾತ್ರಿಯಿಡೀ ಜನರ ಜಾಗರಣೆ

ಜಿಲ್ಲೆಯ ಚಿಂಚೋಳಿ ತಾಲೂಕಿನ ಗಡಿಕೇಶ್ವರ ಗ್ರಾಮದಲ್ಲಿ ಭೂಕಂಪನ ಹಿನ್ನೆಲೆಯಲ್ಲಿ ಜನರಿಗೆ ಉಳಿದುಕೊಳ್ಳಲು ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಲಾಗಿತ್ತು.ಆದರೆ ಆ ಶೆಡ್ ಮಳೆ ನೀರಿಗೆ ಸಂಪೂರ್ಣ ತೋಯಿದು ಹೋಗಿ ವಾಸಿಸಲು ಅನಾನುಕೂಲವಾಗುವಂತಿದೆ.

ಹೌದು ಗ್ರಾಮದ ಸರ್ಕಾರಿ ಶಾಲೆ ಆವರಣದಲ್ಲಿ ಗಡಿಕೇಶ್ವರ ಜನರಿಗಾಗಿ ಶೆಡ್‌ಗಳ ನಿರ್ಮಾಣ ಮಾಡಲಾಗಿತ್ತು.ನಿನ್ನೆ ಸಂಜೆ ಸುರಿದ ಭಾರಿ ಮಳೆಗೆ ಆ ಶೆಡ್ ಸಂಪೂರ್ಣ ಕೆಸರು ಗದ್ದೆಯಂತಾಗಿದ್ದು, ಸರಿಯಾಗಿ ನಿರ್ಮಾಣ ಮಾಡದಿದ್ದರಿಂದ ಸಂಪೂರ್ಣ ಮಳೆ ನೀರಿಗೆ ತೋಯಿದು ಹೋಗಿದೆ

ಅಧಿಕಾರಿಗಳು ಕಾಟಾಚಾರಕ್ಕೆ ಶೆಡ್‌ಗಳನ್ನ ನಿರ್ಮಾಣ ಮಾಡಿದ್ರಾ ಅನ್ನುವುದು ಜನರ ಸಂಶಯವಾಗಿದೆ. ಮನೆಯಲ್ಲೂ ಮಲಗುವ ಹಾಗಿಲ್ಲ ಇಲ್ಲೂ ಮಲಗುವಂಗಿಲ್ಲ ಎಂದು ಬೆಳಗ್ಗೆ ವರೆಗೂ ಜನರು ಬಿಡುವಿಲ್ಲದೇ ಸುರಿಯುತ್ತಿದ್ದ ಮಳೆ ಹಾಗೂ ಭೂಕಂಪನಕ್ಕೆ ಹೆದರಿ ಜಾಗರಣೆ ಮಾಡಿದ್ದಾರೆ.

ಊಟದ ವ್ಯವಸ್ಥೆ ಏನೋ ಮಾಡಿದ್ದಾರೆ ಆದರೆ ಸರಿಯಾದ ಶೆಡ್ ವ್ಯವಸ್ಥೆ ಇಲ್ಲ ಎಂಬುದು ಗ್ರಾಮಸ್ಥರ ಆಕ್ರೋಶ.

ನಿನ್ನೆ ಗಡಿಕೇಶ್ವರ ಗ್ರಾಮದಲ್ಲಿ ಸಂಸದ ಡಾ ಉಮೇಶ್ ಜಾಧವ್ ಹಾಗೂ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ್ ಗ್ರಾಮ ವಾಸ್ತವ್ಯ ಹೂಡಿದ್ದರು.

Edited By : Shivu K
PublicNext

PublicNext

17/10/2021 10:32 am

Cinque Terre

54.41 K

Cinque Terre

0

ಸಂಬಂಧಿತ ಸುದ್ದಿ