ಕೊರಟಗೆರೆ: ತಾಲ್ಲೂಕಿನಲ್ಲಿ ಭಾನುವಾರ ರಾತ್ರಿ ಸುರಿದ ಭಾರಿ ಮಳೆಯಿಂದ ನೀರಿನ ಹರಿವು ಹೆಚ್ಚಾಗಿದ್ದು, ನೀರಿನ ಬಗ್ಗೆ ಮಾಹಿತಿ ತಿಳಿಯದ ವಾಹನ ಚಾಲಕನೋರ್ವ ಅಕ್ಕಿ ಮೂಟೆ ತುಂಬಿದ್ದ ಟಾಟಾ ಎಸ್ ವಾಹನವನ್ನು ನೀರು ಹರಿಯುತ್ತಿದ್ದ ಕೋಡಿ ರಸ್ತೆಯಲ್ಲಿ ಸಂಚರಿಸಲು ಹೋಗಿ. ನೀರು ಪಾಲಾಗಿರುವ ಘಟನೆ ಸೋಮವಾರ ನಡೆದಿದೆ.
ವಡ್ಡಗೆರೆ ಗ್ರಾಮ ಪಂಚಾಯ್ತಿಯ ಮಲ್ಲಪ್ಪನಹಳ್ಳಿ ಬಳಿ ಹರಿಯುತ್ತಿರುವ ಜಯಮಂಗಲಿ ನದಿಯಲ್ಲಿ ಟಾಟಾ ಏಸ್ ಸಮೇತ ಕೊಚ್ಚಿ ಹೋದ ಆಂಧ್ರ ಮೂಲದ ಚಾಲಕ ಎಂದು ತಿಳಿದು ಬಂದಿದೆ. ಟಾಟಾ ಏಸ್ ವಾಹನದಲ್ಲಿದ್ದ ಕ್ಲೀನರ್ ಆನಂದ್ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದು, ವಾಹನ ಚಾಲಕ ಮತ್ತು ವಾಹನ ನೀರಿನಲ್ಲಿ ಕೊಚ್ಚಿಹೋಗಿದೆ.
ಇನ್ನು ಘಟನೆ ನಡೆದ ಸ್ಥಳಕ್ಕೆ ತಾಲೂಕು ದಂಡಾಧಿಕಾರಿ ನಾಹೀದಾ ಜಮ್ ಜಮ್ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಅಗ್ನಿಶಾಮಕ ದಳ ಮತ್ತು ಪೊಲೀಸ್ ಇಲಾಖೆ
ಅಧಿಕಾರಿಗಳು ಭೇಟಿ ನೀಡಿ ಕೊಚ್ಚಿ ಹೋಗಿರುವ ಚಾಲಕನನ್ನು ಹುಡುಕುವ ಕಾರ್ಯಚರಣೆ ಮಾಡುತ್ತಿದ್ದರು ಚಾಲಕನ ಬಗ್ಗೆ ಯಾವುದೇ ಸುಳಿವು ದೊರೆತಿಲ್ಲ.. ನಾಳೆಯೂ ಸಹ ಕಾರ್ಯಾಚರಣೆ ನಡೆಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಈ ಅವಘಡಕ್ಕೆ ಮುಖ್ಯ ಕಾರಣ ನಮಗೆ ಬ್ರಿಡ್ಜ್ ನಿರ್ಮಾಣ ಮಾಡುತ್ತಿರುವುದು ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸ್ಥಳಕ್ಕೆ ಮಾಜಿ ಶಾಸಕ ಸುಧಾಕರ್ ಲಾಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವರದಿ ರಾಘವೇಂದ್ರ ದಾಸರಹಳ್ಳಿ ಪಬ್ಲಿಕ್ ನೆಕ್ಸ್ಟ್,ತುಮಕೂರು
PublicNext
05/09/2022 09:33 pm