ಅಥಣಿ: ಸೋಮವಾರ ಸಾಯಂಕಾಲದಿಂದ ಸುರಿದ ವರುಣ ಆರ್ಭಟಕ್ಕೆ ಅಥಣಿ ತಾಲೂಕಿನ ಹಲವು ಗ್ರಾಮಗಳ ಜಮೀನಿಗೆ ನೀರು ನುಗ್ಗಿದ್ದಲ್ಲದೆ, ಗ್ರಾಮಗಳಲ್ಲೂ ನೀರು ನುಗ್ಗಿದೆ. ಇದರಿಂದ ಜನರು ತತ್ತರಿಸಿದ್ದಾರೆ. ಹಲವು ವಾಹನಗಳು ನೀರಿನಲ್ಲಿ ಮುಳುಗಡೆಯಾಗಿವೆ. ಜನರ ಬದುಕು ಅತಂತ್ರವಾಗಿದೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸತ್ತಿ ಗ್ರಾಮದಲ್ಲಿ ನಿನ್ನೆ ರಾತ್ರಿ ಸುರಿದ ಮಳೆಗೆ ಮನೆ ಮನೆಗೂ ನೀರುನುಗ್ಗಿ, ನೀರುಪಾಲಾಗಿ, ಜನರ ಜೀವನ ಅಸ್ತವ್ಯಸ್ತವಾಗಿದೆ. ಇಲ್ಲಿನ ಜನತೆ ಮಳೆ ಪ್ರಾರಂಭವಾಯಿತೆಂದರೆ ಸಾಕು ತಮ್ಮ ಜೀವವನ್ನು ಕೈಯಲ್ಲಿ ಹಿಡಿದು ಜೀವಿಸಬೇಕಾಗುತ್ತದೆ, ಪ್ರತಿ ಸಲ ಮಳೆಗಾಲ ಪ್ರಾರಂಭವಾದರೆ ಸಾಕು ಈ ತರ ಸನ್ನಿವೇಶ ಪುನರಾವರ್ತನೆ ಆಗುತ್ತದೆ ಈ ಕುರಿತು ಸುಮಾರು ಸಲ ಸಂಬಂಧಪಟ್ಟವರಿಗೆ ಮನವಿ ಮಾಡಿದರೂ ಕೂಡ ಕ್ಯಾರೆ ಅನ್ನದ ಅಭಿವೃದ್ಧಿ ಅಧಿಕಾರಿಗಳು ಊರ ಉಸಾಬರಿ ನಮಗೇಕೆ ಅನ್ನುವ ನಿಟ್ಟಿನಲ್ಲಿ ಇದ್ದಾರೆ ಪಂಚಾಯಿತಿ ಅಧಿಕಾರಿಗಳು
ಇನ್ನು ಮುಂದಾದರೂ ಕೂಡ ಈ ತರ ಸಮಸ್ಯೆ ಅನುಭವಿಸುತ್ತಿರುವ ಬಡ ಕುಟುಂಬಗಳಿಗೆ ಶಾಸಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ನೀರಲ್ಲಿ ತೇಲಾಡುತ್ತಿರುವ ಈ ಬಡ ಕುಟುಂಬವನ್ನು ರಕ್ಷಿಸುತ್ತಾರೆ ಇಲ್ಲವೇ ಎಂಬುದು ಕಾದು ನೋಡಬೇಕು.
PublicNext
06/09/2022 05:41 pm