ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಳೆ ರಭಸಕ್ಕೆ ಕೊಚ್ಚಿ ಹೋದ ಬೃಹತ್ ರಸ್ತೆ: ನೂರಾರು ಎಕರೆ ಬೆಳೆ ನಾಶ

ಗದಗ: ಮಳೆ ಅವಾಂತರಕ್ಕೆ ಗದಗ ತಾಲೂಕಿನ ನಾಗಾವಿ ಬಳಿ ಕೆರೆ ಒಡೆದಿದೆ. ಇದರಿಂದ ಕೆರೆ ಪಕ್ಕದ ರಸ್ತೆ ಸಂಪೂರ್ಣವಾಗಿ ಕೊಚ್ಚಿಕೊಂಡು ಹೋಗಿದೆ. ಗದಗ ನಿಂದ ನಾಗಾವಿ ಮಾರ್ಗವಾಗಿ ಬೆಳಧಡಿ ಶಿರಹಟ್ಟಿ ಸಂಪರ್ಕ ಕಲ್ಪಿಸುವ ರಸ್ತೆ ಹಾನಿಯಾಗಿದೆ.

ಸುಮಾರು 20 ರಿಂದ 30 ಅಡಿಯಷ್ಟು ಆಳ, 50 ಮೀಟರ್ ನಷ್ಟು ಉದ್ದ ರಸ್ತೆ ಕೊಚ್ಚಿ ಹೋಗಿದೆ. ಈ ಕೆರೆ ಒಡೆದ ಪರಿಣಾಮ ಕೆಳಭಾಗದ ನೂರಾರು ಎಕರೆ ಬೆಳೆ ಹಾನಿಯಾಗಿದೆ. ಕೆರೆ ಒಡೆದು ರಸ್ತೆ ಕೊಚ್ಚಿಹೋದ್ರು ಯಾವುದೇ ಭದ್ರತೆ ಇಲ್ಲ.ಘಟನೆ ನೋಡಲು ನೂರಾರು ಜನ್ರು ಬರ್ತಿದ್ದಾರೆ. ರಸ್ತೆ ಕುಸಿತವಾಗ್ತಿದ್ರು ರಕ್ಷಣೆ ಇಲ್ಲದಕ್ಕೆ ಜನ್ರಲ್ಲಿ ಆತಂಕ ಎದುರಾಗಿದೆ.

Edited By : Somashekar
PublicNext

PublicNext

06/09/2022 07:45 pm

Cinque Terre

53.05 K

Cinque Terre

0

ಸಂಬಂಧಿತ ಸುದ್ದಿ