ನವದೆಹಲಿ: ರಾಷ್ಟ್ರೀಕೃತಗೊಂಡಿದ್ದ ಪ್ರತಿಷ್ಟಿತ ಏರ್ ಇಂಡಿಯಾ ಸಂಸ್ಥೆಯು 69 ವರ್ಷಗಳ ನಂತರ ಮರಳಿ ಟಾಟಾ ಸನ್ಸ್ ಸಂಸ್ಥೆಗೆ ಸೇರಿದೆ. ಮತ್ತೊಮ್ಮೆ ಸೇವೆ ಆರಂಭಿಸಿದ ಟಾಟಾ ಸನ್ಸ್ ತನ್ನ ಎಲ್ಲ ವಿಮಾನಗಳಲ್ಲಿ ಪ್ರಯಾಣಿಕರಿಗೆ ಉತ್ತಮ ಹಾಗೂ ಉತ್ಕೃಷ್ಟ ಸೇವೆಗಳನ್ನು ನೀಡಲು ಮುಂದಾಗಿದೆ. ಈ ಮೂಲಕ ಏರ್ ಇಂಡಿಯಾದ 'ಮಹಾರಾಜ' ಜನರ ಮನದಲ್ಲಿ ಮನೆ ಮಾಡಲು ಮುಂದಾಗಿದ್ದಾನೆ. ಇದಕ್ಕಾಗಿ ಸರ್ಕಾರದ ಬಂಡವಾಳ ಹಿಂತೆಗೆತ ಪ್ರಕ್ರಿಯೆ ಯಶಸ್ವಿಯಾಗಿ ಮುಗಿದಿದೆ ಎಂದು ಹೇಳಲಾಗಿದೆ.
ಮುಂಬೈನಿಂದ ಕಾರ್ಯ ನಿರ್ವಹಿಸುವ ನಾಲ್ಕು ವಿಮಾನಗಳಿಂದ ಆಹಾರ ಸೇವೆಯ ವಿಸ್ತರಣೆ ಕೂಡ ಪರಿಚಯಿಸಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಗುರುವಾರದಿಂದ ಮುಂಬೈ- ದೆಹಲಿ (A1864), ಮುಂಬೈ-ದೆಹಲಿ (A1687), ಮುಂಬೈ- ಅಬುಧಾಬಿ (A1945) ಹಾಗೂ ಮುಂಬೈ-ಬೆಂಗಳೂರು (A1639) ವಿಮಾನಗಳಲ್ಲಿ ಆಹಾರ ಸೇವೆ ವಿಸ್ತರಣೆ ಆಗಲಿದೆ. ಮುಂಬೈ- ದೆಹಲಿ, ಮುಂಬೈ - ದೆಹಲಿ, ಮುಂಬೈ- ಬೆಂಗಳೂರು, ಮುಂಬೈ - ಲಂಡನ್, ಮುಂಬೈ - ನ್ಯೂಯಾರ್ಕ್, ಮುಂಬೈ - ಅಬುಧಾಬಿ ನಡುವೆ ಕಾರ್ಯನಿರ್ವಹಿಸುವ ವಿಮಾನಗಳಲ್ಲಿ ಊಟದ ವ್ಯವಸ್ಥೆ ಸುಧಾರಣೆ ಮಾಡಲು ನಿರ್ಧರಿಸಲಾಗಿದೆ. ಟಾಟಾ ವಿಮಾನ ಕ್ಯಾಟೆರಿಂಗ್ ಸೇವೆ ನೀಡುವ ತಾಜ್‌ಸಾಟ್ಸ್‌ನ ನಿರ್ದೇಶನದನ್ವಯ ಈ ಬದಲಾವಣೆ ತರಲಾಗಿದೆ.
ಭೋಜನಕ್ಕೆ ನೂತನ ಮಾರ್ಗಸೂಚಿ: ಪ್ರಯಾಣಿಕರಿಗೆ ಗುಣಮಟ್ಟದ ಊಟ ಹಾಗೂ ಸೇವೆ ಒದಗಿಸಲು ಟಾಟಾ ಸಮೂಜ ಭೋಜನಕ್ಕಾಗಿಯೇ ಹೊಸ ಮಾರ್ಗಸೂಚಿ ರಚಿಸಿದೆ. ಪ್ರತಿಯೊಂದು ಊಟದ ವೇಳೆ ನಿರ್ದೇಶಿಸಲಾದ ಮಾರ್ಗಸೂಚಿಯನ್ವಯವೇ ಗ್ರಾಹಕರಿಗೆ ನೀಡಬೇಕು ಎಂದು ಸಿಬ್ಬಂದಿಗಳಿಗೆ ಸೂಚಿಲಾಗಿದೆ. ಬ್ಯುಸಿನೆಸ್ ಕ್ಲಾಸ್ ಹಾಗೂ ಎಕಾನಮಿ ಕ್ಲಾಸ್‌ಗೆ ಪ್ರತ್ಯೇಕ ಸೂಚಿಗಳನ್ನು ತಯಾರಿಸಲಾಗಿದೆ.
ವೈನ್ ಗ್ಲಾಸ್ ಹಾಗೂ ಮೆಲಮೈನ್ ಕಪ್‌ಗಳ ಬಳಕೆ: ಎಕಾನಮಿ ಕ್ಲಾಸ್‌ನಲ್ಲಿ ಪ್ರಯಾಣಿಸುವವರಿಗೆ ಮೆಲಮೈನ್ ಗ್ಲಾಸ್‌ಗಳಲ್ಲಿ ಚಹಾ ಹಾಗೂ ಕಾಫಿಯನ್ನು ನೀಡಬೇಕು ಎಂದು ಸಿಬ್ಬಂದಿಗಳಿಗೆ ನಿರ್ದೇಶಿಸಲಾಗಿದೆ. ಬ್ಯುಸಿನೆಸ್ ಹಾಗೂ ಫಸ್ಟ್ ಕ್ಲಾಸ್‌ನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ವೈನ್ ನೀಡುವಾಗ ಹೈ ಬಾಲ್ ಹಾಗೂ ವೈನ್ ಗ್ಲಾಸ್‌ಗಳಲ್ಲಿ ನೀಡಬೇಕು ಎಂದು ಸಿಬ್ಬಂದಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಪ್ರಾಸಿಲೈನ್ ಕಪ್‌ಗಳಲ್ಲಿ ಚಹಾ ಅಥವಾ ಕಾಫಿ ನೀಡಬೇಕು ಎಂದು ಸೂಚಿಸಲಾಗಿದೆ.
ಬ್ಲಾಂಕೆಟ್ ಹಾಗೂ ತಲೆದಿಂಬು: ಬ್ಯುಸಿನೆಸ್ ಹಾಗೂ ಫಸ್ಟ್ ಕ್ಲಾಸ್ ಪ್ರಯಾಣಿಕರಿಗೆ ತಪ್ಪದೇ ಬ್ಲಾಕೆಂಟ್ ಹಾಗೂ ತಲೆದಿಂಬು ನೀಡುವುದು ಹಾಗೂ ಎಕಾನಮಿ ಕ್ಲಾಸ್ ಪ್ರಯಾಣಿಕರು ಬಯಸಿದರೆ ನೀಡಲು ಪ್ರತೀ ವಿಮಾನದಲ್ಲೂ 50 ಬ್ಲಾಕೆಂಟ್ ಹಾಗೂ ತಲೆದಿಂಬುಗಳನ್ನು ಹೆಚ್ಚುವರಿಯಾಗಿ ಇಟ್ಟುಕೊಳ್ಳಲು ಸಿಬ್ಬಂದಿಗೆ ಸೂಚಿಸಲಾಗಿದೆ.
PublicNext
28/01/2022 06:17 pm