ಮುಂಬೈ: ಸುಮಾರು ಏಳು ದಶಕಗಳ ನಂತರ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯು ವಾಪಸ್ ಸಂಸ್ಥಾಪಕ ಸಂಸ್ಥೆ ಟಾಟಾ ಗ್ರೂಪ್‌ಗೆ ಬರಲು ಸಜ್ಜಾಗಿದೆ. ಇದಕ್ಕಾಗಿ ಔಪಚಾರಿಕ ಕ್ರಿಯೆಗಳು ಮುಗಿದು ಐರ್ಲೆಂಡ್‌ನಿಂದ ದಾಖಲಾತಿಗಳಿಗಾಗಿ ಕಾಯಲಾಗುತ್ತಿದೆ.
ಏರ್ ಇಂಡಿಯಾ ಸಂಸ್ಥೆಯು ಸಂಪೂರ್ಣ ತನ್ನ ಸುಪರ್ದಿಗೆ ಬಂದ ನಂತರ ಟಾಟಾ ಗ್ರೂಪ್ ಹಲವಾರು ಬದಲಾವಣೆಗಳನ್ನು ಅಳವಡಿಸಲು ಯೋಜಿಸಿದೆ. ಅದರ ಪರೀಕ್ಷಾರ್ಥವಾಗಿ ಈಗಾಗಲೇ ನಾಲ್ಕು ವಿಮಾನಗಳಲ್ಲಿ ಪ್ರಯಾಣಿಕರಿಗಾಗಿ ವಿಶೇಷ ಭೋಜನ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಮೂಲಕ ಪ್ರಯಾಣಿಕರಿಗೆ ಹೊಸ ಉತ್ಕೃಷ್ಟ ಸೇವೆಗಳನ್ನು ನೀಡಲು ಆರಂಭಿಸಿದ್ದೇವೆ ಎಂದಿ ಏರ್ ಇಂಡಿಯಾ ಅಧಿಕಾರಿಗಳು ತಿಳಿಸಿದ್ದಾರೆ.
ಇದರೊಂದಿಗೆ ವಿಮಾನದ ಕ್ಯಾಬಿನ್ ಸಿಬ್ಬಂದಿ ಸದಸ್ಯರಿಗೆ ಹೊಸ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಸಿಬ್ಬಂದಿ ಅಚ್ಚುಕಟ್ಟಾಗಿ ಬಟ್ಟೆ ಧರಿಸಿರಬೇಕು. ನಿರ್ಗಮನ ವೇಳೆಯ ಮೈನಸ್ ಹತ್ತು ನಿಮಿಷದ ವೇಳೆಯಲ್ಲಿ ಬಾಗಿಲು ಮುಚ್ಚಬೇಕು. ಊಟಕ್ಕಾಗಿ ಅಡುಗೆ ಸಿಬ್ಬಂದಿ ನೇಮಿಸಿ ಅವರಿಗೆ ಅಗತ್ಯ ವಸ್ತುಗಳನ್ನು ನೀಡಲಾಗಿದೆ. ಸದ್ಯ ದೆಹಲಿ-ಮುಂಬೈ ಹಾಗೂ ಪ್ರಮುಖ ಗಲ್ಫ್ ಮಾರ್ಗಗಳು ಯುಎಸ್, ಯುಕೆಗೆ ತೆರಳುವ ವಿಮಾನಗಳಲ್ಲಿ ಈ ಬದಲಾವಣೆ ಆಗಲಿದೆ ಎಂದು ಏರ್ ಇಂಡಿಯಾ ತಿಳಿಸಿದೆ.
PublicNext
27/01/2022 07:29 pm