ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಾಹಿತ್ಯ ವಲಯದ ಮೂವರು ದಿಗ್ಗಜರಿಗೆ ಡಾ.ಬೆಟಗೇರಿ ಕೃಷ್ಣಶರ್ಮ ಪ್ರಶಸ್ತಿ

ಧಾರವಾಡ: 2020-21ನೇ ಸಾಲಿನ ಡಾ.ಬೆಟಗೇರಿ ಕೃಷ್ಣಶರ್ಮ ಕಾವ್ಯ, ಕಥೆ ಮತ್ತು ಕಾದಂಬರಿ ಪ್ರಶಸ್ತಿಗಳನ್ನು ಮೂವರು ಹಿರಿಯ ಸಾಹಿತಿಗಳಿಗೆ ಪ್ರದಾನ ಮಾಡಲಾಗಿದೆ.

ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಅವರಿಗೆ ಡಾ.ಬೆಟಗೇರಿ ಕೃಷ್ಣಶರ್ಮ ಕಾವ್ಯ ಪ್ರಶಸ್ತಿ, ಡಾ.ಕುಂ.ವೀರಭದ್ರಪ್ಪ ಅವರಿಗೆ ಡಾ.ಬೆಟಗೇರಿ ಕೃಷ್ಣಶರ್ಮ ಕಾದಂಬರಿ ಪ್ರಶಸ್ತಿ ಹಾಗೂ ವೈದೇಹಿ ಅವರಿಗೆ ಡಾ.ಬೆಟಗೇರಿ ಕೃಷ್ಣಶರ್ಮಾ ಕಥಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಪ್ರಶಸ್ತಿಯು ತಲಾ 50 ಸಾವಿರ ರೂಪಾಯಿ ಹಾಗೂ ಪ್ರಮಾಣ ಪತ್ರ ಒಳಗೊಂಡಿದೆ.

ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಡಾ.ಗುರುಲಿಂಗ ಕಾಪಸೆ ಅವರು, ಈ ಪ್ರಶಸ್ತಿ ಆಯ್ಕೆಯಲ್ಲಿ ಭಾಷೆ, ಪ್ರಾದೇಶಿಕ ಹಾಗೂ ಸಾಮಾಜಿಕ ನ್ಯಾಯವನ್ನು ಪರಿಗಣಿಸಲಾಗಿದೆ. ಪ್ರಶಸ್ತಿ ಪಡೆದ ಮೂವರು ಸಾಹಿತಿಗಳು ಶ್ರೇಷ್ಠರಾಗಿದ್ದಾರೆ. ಈ ಪ್ರತಿಷ್ಠಾನದ ಕಾರ್ಯ ರಾಜ್ಯದ ಇತರ ಪ್ರತಿಷ್ಠಾನಕ್ಕೆ ಮಾದರಿಯಾಗಿದೆ ಎಂದರು

Edited By : Nirmala Aralikatti
PublicNext

PublicNext

26/09/2021 09:43 pm

Cinque Terre

44.16 K

Cinque Terre

0