ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೇಶಕ್ಕೆ ಮತ್ತಷ್ಟು ‘ಪ್ರಚಂಡ ಬಲ’; ಸ್ವದೇಶಿ ನಿರ್ಮಿತ ‘ಲೈಟ್ ಕೋಂಬ್ಯಾಟ್ ಕಾಪ್ಟರ್ಸ್‌’ ಸೇನೆಗೆ ಗಿಫ್ಟ್..!

ಭಾರತೀಯ ಸೇನೆಗೆ ಇವತ್ತು ಮತ್ತಷ್ಟು ‘ಪ್ರಚಂಡ ಬಲ’ ಸಿಕ್ಕಿದೆ. ಅದು ಕೇವಲ ಮತ್ತೊಂದು ವೆಪನ್ ಅಂತಲ್ಲ. ಮೇಕ್ ಇನ್ ಇಂಡಿಯಾ ಎಂಬ ಸ್ವದೇಶಿ ಶಕ್ತಿ. ದೇಶದ ಹೆಮ್ಮೆ ಹೆಚ್‌ಎಎಲ್ ನಿರ್ಮಿತ ಆಗಸದಲ್ಲಿ ಹಗುರವಾಗಿ ಹಕ್ಕಿಯಂತೆ ಹಾರುವ ಹೆಲಿಕಾಪ್ಟರ್‌ಗಳನ್ನ (ಲೈಟ್ ಕೋಂಬ್ಯಾಟ್ ಹೆಲಿಕಾಪ್ಟರ್ಸ್‌) ಭಾರತೀಯ ಸೇನೆಗೆ ಹಸ್ತಾಂತರ ಮಾಡಲಾಗಿದೆ.

ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿರುವ ಲಘು ಯುದ್ಧ ಹೆಲಿಕಾಪ್ಟರ್‌ಗಳ ಮೊದಲ ಬ್ಯಾಚ್​ನ ಕಾಪ್ಟರ್ಸ್​ ಇಂದು ಸೇನೆಗೆ ಸೇರ್ಪಡೆ ಆಗಲಿವೆ. ಜೋಧಪುರದಲ್ಲಿ ಆಯೋಜಿಸಲಾಗಿರುವ ಸಮಾರಂಭದಲ್ಲಿ ರಕ್ಷಣಾ ಸಚಿವ ರಾಜನಾಥ ಸಿಂಗ್ 15 ಲಘು ಯುದ್ಧ ಹೆಲಿಕಾಪ್ಟರ್‌ಗಳನ್ನ ಭಾರತೀಯ ವಾಯುಪಡೆಗೆ ಹಸ್ತಾಂತರಿಸಿದರು. 15ರಲ್ಲಿ 10 ವಾಯುಸೇನೆಗೆ ಸೇರ್ಪಡೆಯಾದ್ರೆ, 5 ಭೂಸೇನೆಗೆ ನೀಡಲಾಯಿತು.

ವಿವಿಧ ವ್ಯಾಪ್ತಿಯ ಕ್ಷಿಪಣಿ ಮತ್ತು ಇತರ ಶಸ್ತ್ರಾಸ್ತ್ರಗಳನ್ನು ಲಾಂಚ್ ಮಾಡಲು ಈ ಕಾಪ್ಟರ್‌ಗಳು ಸೇನೆಗೆ ಹೆಚ್ಚಿನ ಬಲ ನೀಡಲಿವೆ. ಅಂದ್ಹಾಗೆ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಅಂದ್ರೆ, ಹೆಚ್ಎಎಲ್ ಈ ಯುದ್ಧವಿಮಾನಗಳನ್ನು ಅಭಿವೃದ್ಧಿಪಡಿಸಿದೆ. ಸುಮಾರು 3 ಸಾವಿರದ 887 ಕೋಟಿ ರೂಪಾಯಿ ವೆಚ್ಚದಲ್ಲಿ ಹೆಚ್‌ಎಎಲ್‌ ಈ ಲಘು ಯುದ್ಧ ಹೆಲಿಕಾಪ್ಟರ್‌ಗಳನ್ನ ತಯಾರಿಸಿದೆ. ಇವುಗಳನ್ನು ಅತಿ ಎತ್ತರದ ಪ್ರದೇಶದಲ್ಲೂ ನಿಯೋಜನೆ ಮಾಡಲು ಅನುಕೂಲವಾಗುವಂತೆ ವಿನ್ಯಾಸ ಮಾಡಿದೆ.

ಸಂಪೂರ್ಣ ದೇಶಿಯ ತಂತ್ರಜ್ಞಾನದಲ್ಲಿ ಈ ಹೆಲಿಕಾಪ್ಟರ್‌ಗಳನ್ನ ನಿರ್ಮಿಸಲಾಗಿದೆೆ. ಈ ಕಾಪ್ಟರ್ 2 ಜೋಡಿ ಎಂಜಿನ್‌ ಹೊಂದಿದ್ದು, 5.8 ಟನ್ ತೂಕವನ್ನ ಹೊಂದಿವೆ. 20 ಎಂಎಂ ಟರೆಂಟ್‌ ಗನ್, 70 ಎಂಎಂ ಕ್ಷಿಪಣಿಯನ್ನೂ ಸಿಡಿಸುವ ಸಾಮರ್ಥ್ಯವನ್ನ ಹೊಂದಿವೆ.

ಅತಿ ಎತ್ತರ ಪ್ರದೇಶವಾದ ಸಿಯಾಚಿನ್‌ನಲ್ಲೂ ದಾಳಿ ಮಾಡುವ ಸಾಮರ್ಥ್ಯ, ಇತ್ತ ಮರುಭೂಮಿಯಲ್ಲೂ ಸಮರ್ಥ ದಾಳಿ ನಡೆಸುವ ಬಲವನ್ನ ಈ ಲೈಟ್ ಕೋಂಬ್ಯಾಟ್ ಹೆಲಿಕಾಪ್ಟರ್‌ಗಳು ಹೊಂದಿವೆ. ಈಗಾಗಲೇ ಎಲ್ಲಾ ರೀತಿಯ ಶಸ್ತ್ರಾಸ್ತ್ರಗಳ ಫೈರಿಂಗ್‌ ಟೆಸ್ಟ್‌ಗಳಲ್ಲಿ ಎಲ್‌ಸಿಹೆಚ್ ಕಾಪ್ಟರ್‌ಗಳು ಯಶಸ್ವಿಯಾಗಿವೆ.

Edited By : Abhishek Kamoji
PublicNext

PublicNext

03/10/2022 02:14 pm

Cinque Terre

63.1 K

Cinque Terre

2

ಸಂಬಂಧಿತ ಸುದ್ದಿ