This is a modal window.
Beginning of dialog window. Escape will cancel and close the window.
End of dialog window.
ಕೊಪ್ಪಳ: ರಾಜ್ಯದಲ್ಲಿ ಮುಂಗಾರು ಇನ್ನೂ ತನ್ನ ಆರ್ಭಟ ಆರಂಭಿಸಿಲ್ಲ. ಆದರೂ ಈಗಾಗಲೇ ಕೆಲವು ಕೆರೆ, ಹಳ್ಳ, ನದಿಗಳು ಮೈದುಂಬಿಕೊಂಡು ಹರಿಯುತ್ತಿವೆ. ನೀರು ರಭಸವಾಗಿ ಹರಿಯುತ್ತಿದ್ದರೂ ಕೆಲವರು ಅನಗತ್ಯ ರಿಸ್ಕ್ ತೆಗೆದುಕೊಳ್ಳುತ್ತಾರೆ.
ಹೀಗೆ ಯುವಕನೋರ್ವ ರಿಸ್ಕ್ ತೆಗೆದುಕೊಳ್ಳಲು ಹೋಗಿ ತನ್ನ ಬೈಕ್‌ಅನ್ನು ನೀರು ಪಾಲು ಮಾಡಿ ದಡಕ್ಕೆ ಬಂದಿದ್ದಾನೆ. ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ತೊಂಡಿಹಾಳ ಗ್ರಾಮದ ಹಳ್ಳದಲ್ಲಿ ಈ ಘಟನೆ ನಡೆದಿದೆ. ರಭಸದಿಂದ ಹಳ್ಳ ಹರಿಯುತ್ತಿರೋದನ್ನು ಲೆಕ್ಕಿಸದೇ ಯುವಕ ಬೈಕ್ ಸಮೇತ ಹಳ್ಳ ದಾಟಲು ಮುಂದಾಗಿದ್ದಾನೆ. ಈ ವೇಳೆ ನೀರಿನ ರಭಸಕ್ಕೆ ಬೈಕ್ ಕೊಚ್ಚಿ ಹೋಗಿದೆ. ಇನ್ನೇನು ನೀರಿಗೆ ಬಿದ್ದೇಬಿಟ್ಟ ಎನ್ನುವಷ್ಟರಲ್ಲಿ ಬೈಕ್ ಬಿಟ್ಟು ಯುವಕ ದಡಕ್ಕೆ ಬಂದಿದ್ದಾನೆ. ಬೈಕ್ ಕೊಚ್ಚಿ ಹೋದ ದೃಶ್ಯ ಸ್ಥಳೀಯರ ಮೊಬೈಲ್ ಫೋನ್‌ನಲ್ಲಿ ಸೆರೆಯಾಗಿದೆ.
PublicNext
01/07/2022 11:21 am