ಬೆಂಗಳೂರು : ರಾಜ್ಯ ಸರ್ಕಾರ ಮಹತ್ವ ಆದೇಶ ಹೊರಡಿಸಿದ್ದು, ಕೋವಿಡ್ ವೇಳೆ ನೀಡಿದ್ದ ನೋಂದಣಿ, ಮುದ್ರಾಂಕ ಶುಲ್ಕ ರಿಯಾಯಿತಿಯನ್ನ ಮುಂದುವರೆಸುವುದಾಗಿ ತಿಳಿಸಿದೆ.ಈ ಕುರಿತು ದೇವನಹಳ್ಳಿಯಲ್ಲಿ ಮಾಹಿತಿ ನೀಡಿದ ಕಂದಾಯ ಸಚಿವ ಆರ್. ಅಶೋಕ್, “ನೋಂದಣಿ, ಮುದ್ರಾಂಕ ಶುಲ್ಕ ಶೇಕಡ 10ರಷ್ಟು ರಿಯಾಯಿತಿ ಮುಂದುವರಿಸಲಾಗುತ್ತೆ. ಏ.21ರಿಂದ ಆಗಸ್ಟ್ 20ರವರೆಗೆ ಶೇ.10ರಷ್ಟು ರಿಯಾಯಿತಿ ಅನ್ವಯವಾಗಲಿದೆ” ಎಂದರು.
ಇನ್ನು “ಕೋವಿಡ್ ವೇಳೆ ಸ್ಟ್ಯಾಂಪ್ ನೋಂದಣಿ ದರ ಕಡಿಮೆ ಮಾಡಿದ್ವಿ. ಶೇ.10ರಷ್ಟು ಕಡಿಮೆ ಮಾಡಿದ್ದಕ್ಕೆ ನೋಂದಣಿ ಹೆಚ್ಚಾಗಿ ಆಗಿವೆ. 3 ತಿಂಗಳು ಗೈಡ್‌ಲೈನ್ಸ್ ವ್ಯಾಲ್ಯೂನಲ್ಲಿ ಶೇ.10ರಷ್ಟು ರಿಯಾಯಿತಿ ನೀಡಲಾಗುವುದು. ಇನ್ನು ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆ ಚರ್ಚೆ ಮಾಡಿ ಆದೇಶ ಮಾಡ್ತಿದ್ದೇವೆ” ಎಂದರು.
ಸಾರ್ವಜನಿಕರ ಹಿತದೃಷ್ಠಿಯಿಂದ ನೋಂದಣಿ ಮತ್ತು ಮುದ್ರಾಂಕ ಇಲಾಖೆ ವ್ಯಾಪ್ತಿಯ ಉಪ ನೋಂದಣಿ ಕಚೇರಿಗಳ ಕೆಲಸದ ವೇಳೆಯನ್ನು ಮುಂದಿನ ಆದೇಶದವರೆಗೆ ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 7 ಗಂಟೆಯವರೆಗೂ ಜಾರಿಗೆ ಬರುವಂತೆ ವಿಸ್ತರಿಸಿ ಆದೇಶಿಸಿದ್ದಾರೆ.
PublicNext
21/04/2022 11:03 pm