ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇನ್ಮುಂದೆ ಪೋಡಿ ದಾಖಲೆ ಇತರ ನಕ್ಷೆಗಳು ಆನ್‌ಲೈನ್‌ನಲ್ಲೇ ನಡೆಯಲಿವೆ

ಬೆಂಗಳೂರು: ಇಷ್ಟು ದಿನ ಕಂದಾಯ ಇಲಾಖೆಯ ಕೆಲ ದಾಖಲೆಗಳನ್ನು ಪಡೆಯಲು ಕಚೇರಿಗೆ ಹಲವಾರು ಸಲ ಅಲೆದಾಡಬೇಕಿತ್ತು. ಆದ್ರೆ ಇನ್ಮುಂದೆ ರೈತರಿಗೆ ಅವಶ್ಯಕ ದಾಖಲೆಗಳು ಆನ್‌ಲೈನ್‌ನಲ್ಲೇ ದೊರೆಯಲಿವೆ.

ಹೌದು.. ರೈತರು ತಮ್ಮ ಜಮೀನಿಗೆ ಸಂಬಂಧಿಸಿದ 11ಇ, ಪೋಡಿ, ಭೂ ಪರಿವರ್ತನೆ ಸ್ಕೆಚ್, ಹದ್ದುಬಸ್ತು ಮತ್ತು ಇತರೆ ನಕ್ಷೆಗಳನ್ನು ಇನ್ಮುಂದೆ ಆನ್ ಲೈನ ನಲ್ಲಿಯೇ ಪಡೆದುಕೊಳ್ಳಬಹುದಾಗಿದೆ. ಇದಕ್ಕಾಗಿ ರಾಜ್ಯದ ರೈತರು http://103.138.196.154/service19/Report/ApplicationDetails ಈ ಲಿಂಕ್ ಕ್ಲಿಕ್ ಮಾಡಿದರೆ ತಮಗೆ ಬೇಕಾದಂತ ದಾಖಲೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು. ಅಲ್ಲದೇ ನಿಮ್ಮ ಅರ್ಜಿಯ ಸ್ಥಿತಿಗತಿ, ಅರ್ಜಿಗಳನ್ನು ಡೌನ್ ಲೋಡ್ ಕೂಡ ಮಾಡಿಕೊಳ್ಳಬಹುದಾಗಿದೆ.

ನೀವು ನಿಮ್ಮ ಜಮೀನಿನ ನಕ್ಷೆ ಕೇಳಿದ್ದರೇ, ಸರ್ವೆ ಸಿಬ್ಬಂದಿ ಮಾಪನ ಕಾರ್ಯ ಮುಗಿಸಿ, ನಕ್ಷೆ ಅನುಮೋದಿಸಿದ ತಕ್ಷಣ ಇದೇ ವೆಬ್ ಸೈಟ್ ನಲ್ಲಿ ಡೌನ್ ಲೋಡ್ ಕೂಡ ಮಾಡಿಕೊಳ್ಳಬಹುದಾಗಿದೆ.

Edited By : Nagaraj Tulugeri
PublicNext

PublicNext

18/04/2022 09:19 am

Cinque Terre

35.42 K

Cinque Terre

1

ಸಂಬಂಧಿತ ಸುದ್ದಿ