ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅ.3 ರಂದು ಪ್ರಧಾನಿ ಮೋದಿಯಿಂದ ವಿಶ್ವದ ಅತಿ ಉದ್ದದ ಅಟಲ್ ಸುರಂಗ ಮಾರ್ಗ ಉದ್ಘಾಟನೆ

ಶಿಮ್ಲಾ: ವಿಶ್ವದ ಅತಿ ಉದ್ದವಾದ ಸುರಂಗ ಮಾರ್ಗ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹಿಮಾಚಲ ಪ್ರದೇಶದ ಅಟಲ್ ಸುರಂಗ ಮಾರ್ಗವನ್ನು ಇದೇ ಅಕ್ಟೋಬರ್ 3 ರಂದು ಪ್ರಧಾನಿ ನರೇಂದ್ರ ಮೋದಿ ಉದ್ಧಾಟಿಸಲಿದ್ದಾರೆ.

9.2 ಕಿ.ಮೀ ಉದ್ದದ ಅಟಲ್ ಸುರಂಗ ಮಾರ್ಗವೂ ವಿಶ್ವದಲ್ಲಿಯೇ ಅತೀ ಉದ್ದದ ಹೆದ್ದಾರಿ ಮಾರ್ಗವೆಂದು ಹೆಗ್ಗಳಿಕೆಗೆ ಪಾತ್ರವಾಗಲಿದೆ. ಮನಾಲಿಯ ದಕ್ಷಿಣ ತುದಿಯಲ್ಲಿ ನಿರ್ಮಿತಗೊಂಡ ಅಟಲ್ ಸುರಂಗದ ಉದ್ಘಾಟನಾ ಸಮಾರಂಭದಲ್ಲಿ ಮೋದಿ ಭಾಗವಹಿಸಲಿದ್ದಾರೆ.

ಈ ಬಗ್ಗೆ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಹೈ ರಾಮ್ ಠಾಕೂರ್ ಮಾಹಿತಿ ನೀಡಿದ್ದು, ಅಂದು ಪ್ರಧಾನಿ ಮೋದಿ ಅವರು ಮನಾಲಿಗೆ ಭೇಟಿ ನೀಡುತ್ತಿದ್ದು, ಬಳಿಕ ಲಾಹೌಲ್ ಗೆ ಭೇಟಿ ನೀಡಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಬರೋಬ್ಬರಿ 10 ಸಾವಿರ ಅಡಿಗಿಂತ ಹೆಚ್ಚು ಉದ್ದವಾಗಿರುವ ವಿಶ್ವದ ಅತಿ ಉದ್ದವಾದ ಹೆದ್ದಾರಿ ಎಂಬ ಹೆಗ್ಗಳಿಕೆಗೆ ಅಟಲ್ ಸುರಂಗ ಮಾರ್ಗ ಪಾತ್ರವಾಗಿದೆ. 9.2 ಕಿ.ಮೀ ಉದ್ದವಿರುವ ಈ ಸುರಂಗದಲ್ಲಿ ಪ್ರತಿ 60 ಮೀಟರ್‌ಗಳಿಗೆ ಸಿಸಿಟಿವಿ ಕ್ಯಾಮರಾ ಮತ್ತು ಸುರಂಗದ ಒಳಗೆ ಪ್ರತಿ 500 ಮೀಟರ್‌ಗೆ ತುರ್ತು ನಿರ್ಗಮನ ಬಾಗಿಲುಗಳಿವೆ, ಅಗ್ನಿ ಅನಾಹುತಗಳಿಂದ ಕಾಪಾಡಲು ಫೈರ್ ಹೈಡ್ರಾಂಟ್ಸ್ ಅಳವಡಿಸಲಾಗಿದೆ.

ಸುರಂಗದ ಅಗಲ 10.5 ಮೀಟರ್, ಎರಡು ಬದಲಿಯಲ್ಲಿಯೂ 1 ಮೀಟರ್‌ನಷ್ಟು ಫೂಟ್‌ಪಾತ್ ಇದ್ದು, ಈ ಸುರಂಗದಿಂದಾಗಿ ಮನಾಲಿ-ಲೇಹ್ ನಡುವಿನ ಪ್ರಯಾಣದ ಅಂತರ 46 ಕಿ.ಮೀನಷ್ಟು ಕಡಿಮೆಯಾಗಲಿದ್ದು 4 ಗಂಟೆಗಳ ಉಳಿತಾಯವಾಗಲಿದೆ. ಚಳಿಗಾಲದಲ್ಲಿ ರೋಹ್ಟಾಂಗ್ ಪಾಸ್ 6 ತಿಂಗಳುಗಳ ಕಾಲ ಮುಚ್ಚಿರುವುದರಿಂದ ಮನಾಲಿ-ಸರ್ಚು-ಲೇಹ್ ರಸ್ತೆಯೂ ಬಂದ್ ಆಗುತ್ತದೆ. ಹಾಗಾಗಿ ಈ ಸುರಂಗ ಮಾರ್ಗವು ಲೇಹ್-ಮನಾಲಿಯನ್ನು ಸಂಪರ್ಕಿಸುವಲ್ಲಿ ಪ್ರಧಾನ ಪಾತ್ರವಹಿಸಲಿದೆ.

ಈ ಯೋಜನೆಯನ್ನು 1983ರಲ್ಲಿ ಇಂದಿರಾ ಗಾಂಧಿ ಸರ್ಕಾರ ರೂಪಿಸಿತ್ತು, ಬಳಿಕ ಜೂನ್ 2000ರಲ್ಲಿ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸುರಂಗ ಕಾರ್ಯವನ್ನು ಘೋಷಿಸಿ, ಶಂಕು ಸ್ಥಾಪನೆ ಮಾಡಿದ್ದರು. ಸುರಂಗದ ಕೆಲಸ ಪದೇ ಪದೇ ನಿಂತು ಹೋಗಿ ನಂತರ 2010ರ ಜೂನ್‌ನಲ್ಲಿ ಪ್ರಾರಂಭವಾಯಿತು.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 95ನೇ ಜನ್ಮದಿನಾಚರಣೆ ನೆನಪಿಗಾಗಿ 2019 ಡಿಸೆಂಬರ್‌ನಲ್ಲಿ ಪ್ರಧಾನಿ ಮೋದಿ ಅವರು ರೋಹ್ಟಾಂಗ್ ಮಾರ್ಗವನ್ನು ಅಟಲ್ ಸುರಂಗ ಎಂದು ಮರುನಾಮಕರಣ ಮಾಡಿದರು.

Edited By :
PublicNext

PublicNext

02/10/2020 12:16 pm

Cinque Terre

80.45 K

Cinque Terre

3

ಸಂಬಂಧಿತ ಸುದ್ದಿ