ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರವಾರ: ಅಪಾಯಕ್ಕೆ ಆಹ್ವಾನ ನೀಡ್ತಿರೋ ಕರ್ಕಿಯ ತೂಗುಸೇತುವೆ; ಆಡಳಿತದ ನಿರ್ಲಕ್ಷ್ಯದಿಂದ ಜನರ ಪ್ರಾಣಕ್ಕೆ ಕುತ್ತು

ಒಂದ್ಕಡೆ ಹರಿಯುತ್ತಿರೋ ನದಿ, ನದಿಯ ಮೇಲೆ ನಿರ್ಮಿತ ತೂಗು ಸೇತುವೆ, ಸುತ್ತಲೂ ರಮಣೀಯ ಅಚ್ಚ ಹಸಿರ ಸಿರಿಯ ಸೌಂದರ್ಯ. ಯಾರಾದರೂ ಈ ದೃಶ್ಯವನ್ನ ಕಂಡರೆ ಒಮ್ಮೆ ವ್ಹಾವ್ ಅನ್ನದೇ ಇರರು. ಆದರೆ, ಈ ದೃಶ್ಯದಲ್ಲಿ ಕಾಣುವ ತೂಗು ಸೇತುವೆಯನ್ನ ಹತ್ತಿರದಿಂದ ನೋಡಿದರೆ ಬೆಚ್ಚಿ ಬೀಳುವಷ್ಟರ ಮಟ್ಟಿಗೆ ದುಃಸ್ಥಿತಿಯ ಹಂತ ತಲುಪಿದೆ. ಆದರೂ ಪ್ರತಿನಿತ್ಯ ಅನಿವಾರ್ಯವಾಗಿ ಇದೇ ಸೇತುವೆಯನ್ನ ಬಳಸುವ ಅನಿವಾರ್ಯತೆ ಇಲ್ಲಿಯ ಜನರದ್ದಾಗಿದೆ.!!

ಹೌದು, ಇದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕರ್ಕಿ ಗ್ರಾಮದ ಬಡಗಣಿ ನದಿಯ ಮೇಲೆ ನಿರ್ಮಿಸಲಾದ ತೂಗು ಸೇತುವೆಯ ಇಂದಿನ ಪರಿಸ್ಥಿತಿ. ಒಂದು ಬದಿಯಲ್ಲಿ ಕರ್ಕಿ, ಇನ್ನೊಂದು ಬದಿಯಲ್ಲಿ ಪಾವಿನಕುರ್ವೆ ಗ್ರಾಮವನ್ನ ಸಂಪರ್ಕಿಸುವ ಈ ತೂಗುಸೇತುವೆಗೆ ಹಾಕಲಾಗಿರುವ ಹಲಗೆಗಳು ಹಾಳಾಗಿದ್ದು, ಸರಳುಗಳು ತುಕ್ಕು ಹಿಡಿದಿವೆ. ಸೇತುವೆಯ ಕೆಳಭಾಗದ ಆಧಾರದ ಕಬ್ಬಿಣದ ಪಟ್ಟಿಗಳು ಕೂಡ ಈಗಲೋ ಆಗಲೋ ತುಂಡಾಗಿ ಬೀಳುವ ಹಂತದಲ್ಲಿದ್ದು, ಪ್ರತಿದಿನ ಇಲ್ಲಿ ಆತಂಕದಲ್ಲಿ ಓಡಾಡುವ ಪರಿಸ್ಥಿತಿ ಇದೆ ಎಂದು ದೂರುತ್ತಿದ್ದಾರೆ ಇಲ್ಲಿನ ಗ್ರಾಮಸ್ಥರು.

ಪಾವಿನಕುರ್ವಾ ಗ್ರಾಮದಲ್ಲಿ ವಾಸಿಸುತ್ತಿರುವ ಹೆಚ್ಚಿನವರು ಮೀನುಗಾರರು, ಕೂಲಿಕಾರರು. ಹೀಗಾಗಿ ಸಮಯದ ಪರಿವೇ ಇಲ್ಲದೇ ತಮ್ಮ ದುಡಿಮೆಗಾಗಿ ಪಟ್ಟಣಕ್ಕೆ ಓಡಾಡುತ್ತಿರುತ್ತಾರೆ. ಹೀಗೆ ಓಡಾಟಕ್ಕೆ ಇರುವ ಏಕೈಕ ದಾರಿಯೆಂದರೆ ಈ ತೂಗು ಸೇತುವೆ. ಅಲ್ಲದೆ ಗ್ರಾಮದ ಮಕ್ಕಳು ಶಾಲಾ- ಕಾಲೇಜುಗಳಿಗೆ ತೆರಳಲು ಕೂಡ ಇದೇ ತೂಗು ಸೇತುವೆಯನ್ನೇ ಬಳಸಿ ಪಟ್ಟಣಕ್ಕೆ ತೆರಳಬೇಕಿದ್ದು, ಸೇತುವೆ ಜೀರ್ಣಾವಸ್ಥೆ ತಲುಪಿರುವುದು ಎಲ್ಲರಲ್ಲೂ ಆತಂಕಕ್ಕೆ ಕಾರಣವಾಗಿದೆ.

Edited By :
PublicNext

PublicNext

05/09/2022 06:21 pm

Cinque Terre

64.45 K

Cinque Terre

1

ಸಂಬಂಧಿತ ಸುದ್ದಿ