ನಗರದ ಹೊರವಲಯದ ಬಿಂಕದಕಟ್ಟಿಯಲ್ಲಿ ನಿರ್ಮಾಣವಾದ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನ ಲೋಕಾರ್ಪಣೆ ಮಾಡಲಾಯಿತು. ಅರಣ್ಯ ಇಲಾಖೆ ಸಚಿವ ಉಮೇಶ್ ಕತ್ತಿ ಉದ್ಘಾಟಿಸಿದರು. ಸಸ್ಯೋದ್ಯಾನ ಸುಮಾರು 90 ಎಕರೆ ವಿಸ್ತೀರ್ಣ ಹೊಂದಿದೆ. ಇಲ್ಲಿ ಅನೇಕ ಜಾತಿಯ ಗಿಡ ಮರಗಳು, ಔಷಧೀಯ ಸಸ್ಯಗಳು, ಮಕ್ಕಳ ಉದ್ಯಾನವನ, ಜಿಪ್ ಲೈನ್, ವಾಕಿಂಗ್ ಪಾಥ್, ಹಣ್ಣಿನ ವನ, ಕೃಷಿ ವನ, ಸ್ಮೃತಿ ವನ, ಚಿಟ್ಟೆ ವನಗಳು ಆಕರ್ಷಣೀಯವಾಗಿವೆ.
ಕಪ್ಪತಗುಡ್ಡ ಸೆರಗಿನಲ್ಲಿರುವ ಸಾಲು ಮರದ ತಿಮ್ಮಕ್ಕ ಸಸ್ಯೋದ್ಯಾನ, ಪರಿಸರ ಪ್ರೇಮಿಗಳ ಹಾಗೂ ಪ್ರವಾಸಿ ತಾಣವಾಗ್ತಿದೆ. ಇನ್ನಷ್ಟು ಅಭಿವೃದ್ಧಿಗೆ ಸರ್ಕಾರ ಮುಂದಾಗಲಿದೆ. ಇದೊಂದು ಮಾದರಿ ಪಾರ್ಕ್ ಮಾಡುವುದಾಗಿ ಸಚಿವ ಉಮೇಶ ಕತ್ತಿ ಹೇಳಿದರು.
ಈ ವೇಳೆ ಶಾಸಕ ಎಚ್.ಕೆ ಪಾಟೀಲ, ಎಸ್.ವಿ ಸಂಕನೂರ, ಅರಣ್ಯ ಉಪವಿಭಾಗಿಯ ಅಧಿಕಾರಿ ದೀಪಿಕಾ ಬಾಜಪೈ, ನಗರಸಭೆ ಅಧ್ಯಕ್ಷೆ ಉಷಾ ದಾಸರ್ ಸೇರಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಅನೇಕರು ಉಪಸ್ಥಿತರಿದ್ದರು.
PublicNext
26/08/2022 06:44 pm