ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು: ಸೇತುವೆ ಕುಸಿತ; ಸಂಕಷ್ಟದಲ್ಲಿ ವಿದ್ಯಾರ್ಥಿಗಳು

ಕೊರಟಗೆರೆ: ಕಳೆದ ಎರಡು ದಿನಗಳಿಂದ ಬೆಂಬಿಡದೆ ಬಿದ್ದ ಮಳೆಯಿಂದಾಗಿ ಕೊರಟಗೆರೆ ತಾಲೂಕಿನ ಗೊರವನಹಳ್ಳಿ, ತೀತಾ ಮಧ್ಯದ ರಸ್ತೆಯಲ್ಲಿನ ಸೇತುವೆ ಕುಸಿದುಬಿದ್ದು, ರಸ್ತೆ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿದೆ. ಇದರಿಂದ ಶಾಲಾ ಕಾಲೇಜುಗಳಿಗೆ ತೆರಳುವಂತಹ ಮಕ್ಕಳಿಗೆ ತೀವ್ರ ರೀತಿಯ ಸಂಕಷ್ಟ ಎದುರಾಗಿದೆ.

ರಸ್ತೆ ಮಧ್ಯೆ ಗುಂಡಿಯನ್ನು ತೆಗೆದು ವಾಹನಗಳ ಸಂಚಾರಕ್ಕೆ ತಡೆ ಮಾಡಿದ್ದು, ಪಾದಚಾರಿಗಳಿಗೂ ಅವಕಾಶ ಮಾಡಿಕೊಡುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಶನಿವಾರ ಸಂಚಾರಕ್ಕೆ ಅನ್ಯಮಾರ್ಗವಿಲ್ಲದೆ ಕಷ್ಟಸಾಧ್ಯವಾಗಿದ್ದು, ತೀತಾ ಜಲಾಶಯದ ಚಾನಲ್ ಪಕ್ಕ ತಾತ್ಕಾಲಿಕ ಲಘು ವಾಹನ ಸಂಚಾರ ನಡೆಸುತ್ತಿದ್ದು, ಮಳೆ ಬೀಳುತ್ತಿರುವುದರಿಂದ ಹೆಚ್ಚಿನ ನೀರಿನ ಪ್ರಮಾಣ ರಸ್ತೆಯಲ್ಲಿ ಇದ್ದು ಸಂಚಾರಕ್ಕೆ ಕಷ್ಟವಾಗಿದೆ. ಮಕ್ಕಳು ಈ ದುರ್ಲಭ ದಾರಿಯಲ್ಲಿ ಸಂಚರಿಸುವಂತಾಗಿದೆ. ನಿಮ್ಮ ಪಬ್ಲಿಕ್ ನೆಕ್ಸ್ಟ್ ಘಟನಾ ಸ್ಥಳದಿಂದ ನೀಡಿರುವ ಶನಿವಾರ ನಡೆಸಿದ ನೇರ ಗ್ರೌಂಡ್ ರಿಪೋರ್ಟ್ ಇಲ್ಲಿದೆ ನೋಡಿ.!

ವರದಿ:ರಾಘವೇಂದ್ರ ದಾಸರಹಳ್ಳಿ, ಪಬ್ಲಿಕ್ ನೆಕ್ಸ್ಟ್

Edited By : Manjunath H D
PublicNext

PublicNext

28/08/2022 10:37 am

Cinque Terre

32.8 K

Cinque Terre

0

ಸಂಬಂಧಿತ ಸುದ್ದಿ