ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಸಮಯಕ್ಕೆ ಬಾರದ ಬಸ್ : ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು

ಗದಗ: ಸರಿಯಾದ ಸಮಯಕ್ಕೆ ಬಸ್ ಬರುತ್ತಿಲ್ಲ ಎಂದು ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಬಸ್ ತಡೆದು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಹರದಗಟ್ಟಿ ಗ್ರಾಮದಲ್ಲಿ ನಡೆದಿದೆ.

ಶಾಲಾ–ಕಾಲೇಜುಗಳು ಪ್ರಾರಂಭವಾಗಿ ತಿಂಗಳು ಕಳೆದರೂ, ಗ್ರಾಮಾಂತರ ಪ್ರದೇಶಗಳಿಗೆ, ಪಟ್ಟಣ ಪ್ರದೇಶಗಳ ಶಿಕ್ಷಣ ಸಂಸ್ಥೆಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ನಿಗದಿತ ಸಮಯಕ್ಕೆ ಬಸ್ ಸಿಗುತ್ತಿಲ್ಲ. ಶಾಲಾ, ಕಾಲೇಜಿಗೆ ತೆರಳಲು ಪರದಾಡುತ್ತಿರುವ ವಿದ್ಯಾರ್ಥಿಗಳು ಸಾರಿಗೆ ಸಂಸ್ಥೆ ಸಿಬ್ಬಂದಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಹರದಗಟ್ಟಿ ಗ್ರಾಮದಿಂದ ಬೆಳ್ಳಟ್ಟಿ ತೆರಳಲು ಪ್ರತಿದಿನ ಬೆಳಗ್ಗೆ ಬಸ್ ಗಳಿಲ್ಲದೆ ವಿದ್ಯಾರ್ಥಿಗಳು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಉದ್ಯೋಗಿಗಳು, ವ್ಯಾಪಾರಸ್ಥರು, ವಿದ್ಯಾರ್ಥಿಗಳು ಬೆಳ್ಳಟ್ಟಿ ಪಟ್ಟಣ ಸೇರಿ ಸುತ್ತಮುತ್ತಲಿನ ಗ್ರಾಮೀಣ ಭಾಗದಿಂದ ಹೊರಡುತ್ತಾರೆ. ಶಾಲೆಗಳಿಗೆ ತೆರಳಲು ಹರದಗಟ್ಟಿ ಗ್ರಾಮದ ವಿದ್ಯಾರ್ಥಿಗಳು ಬೆಳ್ಳಿಗ್ಗೆ 7 ಗಂಟೆಗೆ ಕಾಯುತ್ತಿರುತ್ತಾರೆ.

ಬೆಳ್ಳಿಗ್ಗೆ 8.30 ಕ್ಕೆ ಬಸ್ 10.30 ಕ್ಕೆ ಬರುತ್ತೆ ಬೆಳ್ಳಟ್ಟಿ ಪಟ್ಟಣ ಮುಟ್ಟಲು 30 ನಿಮಿಷ ಬೇಕು ಅಷ್ಟರಲ್ಲಿ ಶಾಲಾ ತರಗತಿ ಪ್ರಾರಂಭವಾಗುತ್ತವೆ. ಹೀಗಾಗಿ ವಿದ್ಯಾರ್ಥಿಗಳು ಶಾಲೆ ತಪ್ಪಿಸಿ ಮನೆಯಲ್ಲಿ ಉಳಿದು ಬಿಡ್ತಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಡಿಪೋ ಮ್ಯಾನೇಜರ್ ಗೆ ಕೇಳಿದ್ರೆ ವಿದ್ಯಾರ್ಥಿಗಳಿಗೆ ಗದರಿಸಿ ಮಾತನಾಡುತ್ತಾರೆ ಬಸ್ ಅಲ್ಲಿಂದ ಬರಬೇಕು, ಇಲ್ಲಿಂದ ಬರಬೇಕು, ನೋಡೋಣ ಬಿಡೊನಂತೆ ಎಂದು ಉಡಾಫೆ ಉತ್ತರ ಕೊಡುತ್ತಾರೆ.

ಬಹುತೇಕರು ದೈನಿಕ, ಮಾಸಿಕ ಬಸ್ ಪಾಸ್ ಪಡೆದಿದ್ದಾರೆ. ಕೆಎಸ್ ಆರ್ ಟಿಸಿ ಬಸ್ ಗಳನ್ನೇ ಅವಲಂಬಿಸಬೇಕಿದೆ. ಬೆಳಗ್ಗೆ 10 ಗಂಟೆಯಾದರೂ ಬಸ್ ಬರುವುದಿಲ್ಲ ಇದರಿಂದ ತರಗತಿ ತಪ್ಪಿಸುವ ಪರಿಸ್ಥಿತಿ ಎದುರಾಗಿ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.

Edited By : Manjunath H D
PublicNext

PublicNext

19/07/2022 04:35 pm

Cinque Terre

26.72 K

Cinque Terre

0