ಬೆಂಗಳೂರು: ನೀವೂ ಫಸ್ಟ್ ಪಿಯುಸಿ ನಾ.? ಸಾಕಷ್ಟು ಕನಸುಗಳನ್ನು ಇಟ್ಟುಕೊಂಡು ಕಾಲೇಜು ಮೆಟ್ಟಿಲು ಹತ್ತುತ್ತಿದ್ದೀರಾ.? ಹಾಗಿದ್ರೆ ಈ ಸ್ಟೋರಿ ನೋಡಲೇ ಬೇಕು.
ರಾಜ್ಯದಲ್ಲಿ ಈ ಸಲ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಆ ಹಿನ್ನೆಲೆಯಲ್ಲಿ ಕಾಲೇಜು ಅಡ್ಮಿಷನ್ ಪಡೆಯುತ್ತಿರುವವರ ಸಂಖ್ಯೆ ಹೆಚ್ಚಾಗಿಯೇ ಇದೆ. ಆದರೆ ಕೆಲವೊಂದು ಜಿಲ್ಲೆಯಲ್ಲಿ ಮಾನ್ಯತೆ ಪಡೆಯದ ಕಾಲೇಜುಗಳು ವಿದ್ಯಾರ್ಥಿಗಳಿಗೆ ತಪ್ಪು ಮಾಹಿತಿ ನೀಡಿ ಅಡ್ಮಿಷನ್ ಮಾಡಿಸಿಕೊಳ್ತಿರುವ ಆರೋಪ ಕೇಳಿ ಬಂದಿದೆ.
ಹೀಗಾಗಿ ಪಿಯು ಬೋರ್ಡ್ ಈ ವರ್ಷದಿಂದ ಹೊಸದಾಗಿ ಪಟ್ಟಿ ಸಿದ್ಧಪಡಿಸಿಕೊಳ್ಳುತ್ತಿದೆ. ರಾಜ್ಯದಲ್ಲಿ ಮಾನ್ಯತೆ ಪಡೆದ 500-600 ಕಾಲೇಜುಗಳು ಇವೆ. ಈ ಬಗ್ಗೆ ಜಿಲ್ಲಾವಾರು ಉಪ ನಿರ್ದೇಶಕರಿಂದ ಮಾಹಿತಿ ನೀಡಲು ಸೂಚನೆ ನೀಡಲಾಗಿದೆ. ಪಟ್ಟಿ ಅಂತಿಮಗೊಂಡ ಬಳಿಕ ವೆಬ್ ಸೈಟ್ ಹಾಗೂ ಪತ್ರಿಕೆಗಳ ಮೂಲಕ ಮಾನ್ಯತೆ ಹೊಂದಿರುವ ಕಾಲೇಜುಗಳ ವಿವರ ನೀಡಲಾಗುವ ಎಂದು ಪಿಯು ನಿರ್ದೇಶಕರು ತಿಳಿಸಿದ್ದಾರೆ.
ಇನ್ನೂ ಈ ಬಗ್ಗೆ ಪೋಷಕರ ಹಾಗೂ ವಿದ್ಯಾರ್ಥಿಗಳ ಗಮನ ಹರಿಸಬೇಕಿದೆ. ಫೀಸ್ ಪೀಕಲಾಟದಂತಹ ಸಮಸ್ಯೆಗಳಿಂದ ದೂರ ಮಾಡಲು ಇದು ಉಪಕಾರಿ ಆಗಲಿದೆ. ಒಂದು ವೇಳೆ ಯಾಮಾರಿದ್ರೆ ಭವಿಷ್ಯದಲ್ಲಿ ವಿದ್ಯಾರ್ಥಿಗಳಿಗೆ ತೊಂದರೆ ಆಗಬಹುದು.
PublicNext
31/05/2022 05:43 pm