ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೇಂದ್ರದಿಂದ ರಾಜ್ಯಕ್ಕೆ ಈರುಳ್ಳಿ: ಕೆಜಿಗೆ ₹28

ನವದೆಹಲಿ- ಈರುಳ್ಳಿ ಬೆಲೆ ಈಗಾಗಲೇ ಗಗನಕ್ಕೇರಿದೆ. ಕರ್ನಾಟಕ ಸೇರಿ ವಿವಿಧೆಡೆ ₹100 ಗಡಿ ದಾಟಿದೆ. ಹೀಗಾಗಿ ಕೇಂದ್ರ ಸರ್ಕಾರ ಕೆಜಿಗೆ ₹28 ದರದಲ್ಲಿ ಈರುಳ್ಳಿಯನ್ನು ರಾಜ್ಯ ಸರ್ಕಾರಗಳಿಗೆ ನೀಡಲು ಮುಂದಾಗಿದೆ.

ಸದ್ಯ ಈರುಳ್ಳಿ ಪ್ರತಿ ಕೆಜಿಗೆ ಬೆಂಗಳೂರಿನಲ್ಲಿ ₹120, ಮುಂಬೈನಲ್ಲಿ ₹86, ಚೆನ್ನೈನಲ್ಲಿ ₹83, ಕೋಲ್ಕತ್ತಾದಲ್ಲಿ ₹70, ದಿಲ್ಲಿಯಲ್ಲಿ ₹55 ಕ್ಕೆ ಏರಿದೆ. ಈ ರೀತಿ ಬೆಲೆ ಏರಿಕೆ ಬಿಸಿಯಿಂದ ಶ್ರೀಸಾಮಾನ್ಯರು ರೋಸಿ ಹೋಗಿದ್ದಾರೆ‌.

ಈ ಹಿನ್ನಲೆಯಲ್ಲಿ ಮಧ್ಯಸ್ಥಿಕೆ ವಹಿಸಿರುವ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯ ಏರಿಕೆಯಾದ ದರ ನಿಯಂತ್ರಣಕ್ಕಾಗಿ ಈ ಕ್ರಮ ಕೈಗೊಂಡಿದೆ. ಸರ್ಕಾರದ ದಾಸ್ತಾನಿನಲ್ಲಿರುವ ಈರುಳ್ಳಿಯನ್ನು ರಾಜ್ಯಗಳು ಪಡೆದುಕೊಂಡು ಬೆಲೆ ನಿಯಂತ್ರಣಕ್ಕೆ ಸಹಕರಿಸಬೇಕೆಂದು ಕೇಂದ್ರ ಸರ್ಕಾರ ಹೇಳಿದೆ.

ಸದ್ಯ ಮಹಾರಾಷ್ಟ್ರದ ನಾಸಿಕ್ ನಲ್ಲಿ ಕೇಂದ್ರ ಸರ್ಕಾರ ಈರುಳ್ಳಿ ದಾಸ್ತಾನು ಮಾಡಿದೆ.

Edited By : Nagaraj Tulugeri
PublicNext

PublicNext

24/10/2020 12:19 pm

Cinque Terre

119.15 K

Cinque Terre

17