ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಂದು ವಿಶ್ವ ಮಗಳ ದಿನ

ಪ್ರತಿವರ್ಷ ಸೆಪ್ಟೆಂಬರ್ ತಿಂಗಳ ಕೊನೆಯ ಭಾನುವಾರವನ್ನು ಅಂತಾರಾಷ್ಟ್ರೀಯ ಮಗಳ ದಿನವಾಗಿಆಚರಿಸಲಾಗುತ್ತದೆ. ಈ ದಿನವನ್ನು ಮೊದಲು ಆರಂಭಿಸಿದ್ದು, ಭಾರತ ಎನ್ನುವುದು ಗಮನಾರ್ಹ. ನಿಮ್ಮ ಮನೆಯಲ್ಲಿ ಮುದ್ದಿನ ಹೆಣ್ಣು ಮಗು, ಹೆಣ್ಣು ಮಕ್ಕಳು ಇದ್ದರೆ ಅವರಿಗೆ ತಪ್ಪದೇ ಹ್ಯಾಪಿ ಡಾಟರ್ಸ್ ಡೇ ಎಂದು ಶುಭ ಕೋರಲು ಮರೆಯಬೇಡಿ.

ಮಗಳ ದಿನದ ಇತಿಹಾಸ ಮತ್ತು ಮಹತ್ವ

ಹೆಣ್ಣು ಮಗುವಿನ ಕುರಿತು ಇರುವ ಅಸಡ್ಡೆ, ತಾತ್ಸಾರವನ್ನು ಹೋಗಲಾಡಿಸಲು ಅಂತಾರಾಷ್ಟ್ರೀಯ ಮಗಳ ದಿನ ಆಚರಿಸಲಾಗುತ್ತದೆ. ಈ ಮೂಲಕ ಹೆಣ್ಣಿಗೆ ಗೌರವ ಸೂಚಿಸಲಾಗುತ್ತದೆ. ಈ ದಿನದ ಹುಟ್ಟಿನ ಕುರಿತು ಇಂತಹದ್ದೇ ಇತಿಹಾಸ ಎನ್ನುವುದಿಲ್ಲ. ಭಾರತ ಸೇರಿದಂತೆ ಕೆಲವೊಂದು ದೇಶಗಳು ಹೆಣ್ಣಿನ ಮಹತ್ವ ಅರಿತು ಈ ದಿನ ಆಚರಿಸಲು ಆರಂಭಿಸಿವೆ. ಈ ಮೂಲಕ ಲಿಂಗ ತಾರತಮ್ಯ ಹೋಗಲಾಡಿಸಲು ಪ್ರಯತ್ನಿಸಲಾಗುತ್ತಿದೆ.

ಮನೆಯಲ್ಲಿ ಗಂಡು ಮಗು ಹುಟ್ಟಿದಾಗ ಇರುವಷ್ಟೇ ಸಂಭ್ರಮ, ಹೆಣ್ಣು ಮಗು ಹುಟ್ಟಿದಾಗಲೂ ಇರಬೇಕು.

Edited By : Nirmala Aralikatti
PublicNext

PublicNext

25/09/2022 03:57 pm

Cinque Terre

153.84 K

Cinque Terre

1