ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನನಗೆ ‘ಸಾಫ್ಟ್ ವೇರ್ ಹುಡುಗ ಬೇಡ’ : ಸುಂದರಿಯ ಕೋರಿಕೆ

ಬೆಂಗಳೂರು: ಸಾಫ್ಟ್ ವೇರ್ ಉದ್ಯೋಗಿಗಳನ್ನು ಮದುವೆಯಾಗಲು ತುದಿಗಾಲಿನಲ್ಲಿ ನಿಂತಿರುವ ಯುವತಿಯರ ನಡುವೆ ಇಲ್ಲೊಬ್ಬ ಯುವತಿ ನನಗೆ ಸಾಫ್ಟ್ ವೇರ್ ಹುಡುಗ ಬೇಡ ಎಂದು ಮ್ಯಾಟ್ರಿಮೋನಿ ಸೈಟ್ ನಲ್ಲಿ ನೀಡಿರುವ ಪ್ರಕಟಣೆ ವೈರಲ್ ಆಗಿದೆ.ಸದ್ಯ ಈ ಜಾಹೀರಾತು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಮಾತ್ರವಲ್ಲ, ‘ಸಾಫ್ಟ್ ವೇರ್ ಇಂಡಸ್ಟ್ರಿಗೆ ಭವಿಷ್ಯ ಇಲ್ಲವೇ?’ ಎಂಬ ಪ್ರಶ್ನೆಯನ್ನೂ ಕೆಲವರನ್ನು ಕಾಡುತ್ತಿದೆ.

ಶ್ರೀಮಂತರ ಮನೆಯ ಎಂಬಿಎ ಪದವೀಧರೆಯೊಬ್ಬಳ ಮದುವೆಗಾಗಿ ಮ್ಯಾಟ್ರಿಮೋನಿಯಲ್ ನಲ್ಲಿ ಜಾಹೀರಾತು ಪ್ರಕಟವಾಗಿದ್ದು, ಆಕೆಗೆ ಸ್ವಜಾತಿಯ ಐಎಎಸ್/ಐಪಿಎಸ್, ಪಿಜಿ ಡಾಕ್ಟರ್ ಅಥವಾ ಉದ್ಯಮಿ ಆಗಿರುವ ವರ ಬೇಕು ಎಂಬುದಾಗಿ ಬೇಡಿಕೆ ಇಡಲಾಗಿದೆ. ಅಲ್ಲದೆ ‘ದಯವಿಟ್ಟು ಸಾಫ್ಟ್ ವೇರ್ ಇಂಜಿನಿಯರ್ ಕರೆ ಮಾಡಬೇಡಿ’ ಎಂಬುದಾಗಿಯೂ ಈ ಜಾಹೀರಾತಲ್ಲಿ ಉಲ್ಲೇಖಿಸುವ ಮೂಲಕ, ಐಟಿ ಕ್ಷೇತ್ರದಲ್ಲಿರುವ ವರ ಬೇಡ ಎಂದು ಹೇಳಲಾಗಿದೆ.

Edited By : Nirmala Aralikatti
PublicNext

PublicNext

20/09/2022 10:29 pm

Cinque Terre

23.73 K

Cinque Terre

4