ವಿಶ್ವವೇ ಪ್ರಶಂಸಿಸುವಂತ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಂದು 72ನೇ ಹುಟ್ಟು ಹಬ್ಬದ ಸಂಭ್ರಮ.
2014ರ ಮೇ 26 ರಿಂದ ದೇಶದ ಪ್ರಧಾನಿಯಾಗಿರುವ ಅವರು,1950ರ ಸೆ.17ರಂದು ಗುಜರಾತಿನ ವಡ್ನಗರದಲ್ಲಿ ಜನಿಸಿದ್ದರು. 1986ರಲ್ಲಿ ಜಶೋಧಾ ಬೆನ್ ಅವರನ್ನು ವಿವಾಹವಾಗಿ ನಂತರದ ದಿನಗಳಲ್ಲಿ ಅವರಿಂದ ಪ್ರತ್ಯೇಕರಾದರು. ಇನ್ನು 2001ರ ಅ.7ರಿಂದ 2014ರ ಮೇ 22ರವರೆಗೆ ಗುಜರಾತ್ ರಾಜ್ಯದ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿದರು.
ಇನ್ನು ನರೇಂದ್ರ ಮೋದಿಯವರ ಹುಟ್ಟುಹಬ್ಬದ ಪ್ರಯುಕ್ತ ಬಿಜೆಪಿ ದೇಶಾದ್ಯಂತ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಉಚಿತ ವೈದ್ಯಕೀಯ ಶಿಬಿರ ಮತ್ತು ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗಿದೆ.ಇದೇ ವೇಳೆ ದೇಶದ ಪ್ರಧಾನಿಗಳಿಗೆ ಪಬ್ಲಿಕ್ ನೆಕ್ಸ್ಟ್ ಮಾಧ್ಯಮ ಸಂಸ್ಥೆ , ಲಕ್ಷಾಂತರ ಓದುಗರು ಹಾಗೂ ಉದ್ಯೋಗಿಗಳಿಂದಲೂ ಜನ್ಮ ದಿನ ಶುಭಾಶಯಗಳು.
PublicNext
17/09/2022 07:16 am