ಅಮ್ಮಾ.. ಅಮ್ಮಾ.. ಎಂದು ಪುಟಾಣಿಯೋರ್ವ ಕೂಗುತ್ತಿರುವ ಹೃದಯ ಕಲಕುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅದರಲ್ಲೂ ತಾಯಿಯ ಸಮಾಧಿಯ ಬಳಿ ಈ ಮಗು ಮಾಡಿದ್ದನ್ನು ನೋಡಿದರೆ ಕಣ್ಣೀರು ನಿಲ್ಲುವುದಿಲ್ಲ. ಹೃದಯ ಕಲಕುವ ವಿಡಿಯೋ ನೀವೂ ನೋಡಿ. ವೈರಲ್ ಆಗಿರುವ ವಿಡಿಯೋ ಪ್ರಕಾರ, ಮಗುವೊಂದು ತನ್ನ ತಾಯಿಯ ಸಮಾಧಿ ಬಳಿ 'ಅಮ್ಮಾ..ಅಮ್ಮಾ' ಎಂದು ಅಳುತ್ತಿರುವುದನ್ನು ನೀವು ನೋಡಬಹುದು. ಇದು ಹಳೆಯ ವಿಡಿಯೋ… ಆದರೆ ಮತ್ತೊಮ್ಮೆ ಅಂತರ್ಜಾಲದಲ್ಲಿ ವೈರಲ್ ಆಗಿದೆ.
ಕೆಲ ದಿನಗಳ ಹಿಂದೆ ಮಗುವಿನ ತಾಯಿ ಮೃತಪಟ್ಟಿದ್ದರು. ಎರಡು ವರ್ಷದ ಮಗು ತನ್ನ ಅಜ್ಜಿಯನ್ನು ತನ್ನ ತಾಯಿ ಎಲ್ಲಿ ಎಂದು ಕೇಳಿದಾಗ, ಅವಳು ಸಾಮಾಧಿಯತ್ತ ತೋರಿಸಿ, ಇಲ್ಲಿ ಮಲಗಿದ್ದಾಳೆ ಎಂದು ತೋರಿಸಿದ್ದಳು. ಹೀಗಾಗಿ ಮಗು ತನ್ನ ತಾಯಿಯ ಸಮಾಧಿ ಬಳಿ ರಂಧ್ರ ಮಾಡಿ ‘ಅಮ್ಮಾ… ಅಮ್ಮಾ’ ಎಂದು ಕರೆದಿದೆ ಎನ್ನಲಾಗಿದೆ.
PublicNext
30/08/2022 01:59 pm