ಗದಗ : ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಗಲಿ 10 ತಿಂಗಳು ಕಳೀತಾ ಬಂತು.. ಆದ್ರೂ, ಫ್ಯಾನ್ಸ್ ಗೆ ಅವ್ರ ಮೇಲಿನ ಅಭಿಮಾನ ಕಡಿಮೆ ಆಗಿಲ್ಲ. . ಇಂದಿಗೂ ಸಾವಿರಾರು ಅಭಿಮಾನಿಗಳು ದಿನನಿತ್ಯ ಅವರನ್ನ ಸ್ಮರಿಸುತ್ತಾರೆ, ಆರಾಧಿಸುತ್ತಾರೆ.
ಜಾತ್ರೆ, ದಿಬ್ಬಣಗಳಲ್ಲಿ ಅವರ ಫೋಟೋ ಹೊತ್ತು ಮೆರವಣಿಗೆ ಮಾಡ್ತಾರೆ.. ಸ್ಮೈಲ್ ಗೆ ರಾಯಭಾರಿಯಂತಿದ್ದ ಅಪ್ಪುವನ್ನ ನೆನೆದು ಕಣ್ಣೀರು ಹಾಕ್ತಿದ್ದಾರೆ...
ಅತ್ಯಂತ ಸ್ಪೆಷಲ್ ಅಭಿಮಾನಿಗಳ ದಂಡು ಹೊಂದಿರೋ ಅಪ್ಪುಗೆ ಗದಗನಲ್ಲೊಬ್ಬ ಸೂಪರ್ ಸ್ಪೆಷಲ್ ಅಭಿಮಾನಿ ಇದ್ದಾನೆ. ಆ ಅಭಿಮಾನಿಗೆ ಹುಟ್ಟಿದ ಗಂಡು ಮಗುವಿಗೆ ಪುನೀತ್ ರಾಜಕುಮಾರ್ ಅಂತ ನಾಮಕರಣ ಮಾಡ್ಬೇಕು ಅನ್ನೋ ಮಹದಾಸೆ ಹೊಂದಿದಾನೆ. ಮಗನಿಗೆ ಅಪ್ಪು ಹೆಸರಿಡುವ ಮೂಲಕ ನೆಚ್ಚಿನ ನಟನ ನೆನಪು ಸದಾ ಹಸಿರಾಗಿಡ್ಬೇಕು ಎನ್ನುವುದು ಆತನ ಮಹದಾಸೆ.
ಅಷ್ಟೇ ಅಲ್ಲದೆ ಅಪ್ಪು ಮನೆಯಲ್ಲಿಯೇ ರಾಜ್ ಕುಟುಂಬಸ್ಥರ ಸಮ್ಮುಖದಲ್ಲೇ, ಮಗುವಿಗೆ ಪುನೀತ್ ರಾಜಕುಮಾರ್ ಹೆಸರಿಡಬೇಕು ಅಂತ ಈತ ಮನವಿ ಮಾಡಿಕೊಂಡಿದ್ದಾರೆ.
ಅಂದಹಾಗೆ ಗದಗ ಜಿಲ್ಲೆ ನರಗುಂದ ಪಟ್ಟಣದ ಕಸಬಾ ಓಣಿಯ ನಿವಾಸಿ ಮಾರುತಿ ಬೆಳವಣಿಕಿ ಮತ್ತು ಸಂಗೀತ ದಂಪತಿಗೆ 10 ದಿನದ ಹಿಂದೆ ಗಂಡು ಮಗು ಜನಿಸಿದೆ. ಮಗುವಿಗೆ ನಾಮಕರಣ ಮಾಡ್ಬೇಕು ಅನ್ಕೊಂಡಿರೋ ಮಾರುತಿ, ರಾಜ್ ಕುಟುಂಬದ ಸಮ್ಮುಖದಲ್ಲೇ ಹೆಸರಿಡ್ಬೇಕು ಅಂತಾ ಪಟ್ಟು ಹಿಡ್ದಿದಾನೆ.
ಬೆಂಗಳೂರಿನಲ್ಲಿ ಅಪ್ಪು ಅವರ ಮನೆಯಲ್ಲಿಯೇ ನಾಮಕರಣ ಮಾಡಬೇಕು. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಥವಾ ರಾಘಣ್ಣ, ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರ ಪೈಕಿ ಯಾರಾದ್ರೂ ನಾಮಕರಣ ಮಾಡಲಿ ಎನ್ನುವ ಹಂಬಲ ಮಾರುತಿಯವರದ್ದು.
PublicNext
20/08/2022 01:26 pm