ಅಥಣಿ : ಸ್ವಾತಂತ್ರ್ಯ ದಿನಾಚರಣೆ ಅಮೃತಮಹೋತ್ಸವ ಹೊಸ್ತಿಲಲ್ಲಿ ದೇಶವೇ ಸಂಭ್ರಮದಲ್ಲಿದೆ. ಪ್ರತಿಯೊಬ್ಬ ದೇಶಾಭಿಮಾನಿಯೂ ವಿವಿಧ ರೀತಿಯಾಗಿ ತಮ್ಮ ಅಭಿಮಾನವನ್ನು ವ್ಯಕ್ತಪಡಿಸುತ್ತಿದ್ದಾರೆ.
ಸದ್ಯ ಮೂರುವರೆ ವರ್ಷದ ಬಾಲಕನೊಬ್ಬ ವಂದೇ ಮಾತರಂ ಹಾಡನ್ನು ಹಾಡಿ, ಆ ಹಾಡಿಗೆ ತಾನೇ ನಟನೆ ಮಾಡಿ ಗಮನಸೆಳೆದಿದ್ದಾನೆ. ಕೈಯಲ್ಲಿ ರಾಷ್ಟ್ರಧ್ವಜವನ್ನು ಹಿಡಿದು ನಟನೆಯನ್ನು ಮಾಡುತ್ತಿರುವ ಈ ಬಾಲಕನ ಹೆಸರು ಓಜಸ ಧಾಬಡೆ.
ಈ ಬಾಲಕನಿಗೆ ಕೇವಲ ಮೂರುವರೆ ವರ್ಷ ಮೂಲತಃ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದವನು. ಸ್ವಾತಂತ್ರ್ಯ ದಿನಾಚರಣೆ ಅಮೃತಮಹೋತ್ಸವ ಹಿನ್ನಲೆಯಲ್ಲಿ ಬಾಲಕ ವಿಶೇಷ ರೀತಿಯಲ್ಲಿ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾನೆ.
ದೀಪಕ ಧಾಬಡೆ, ಸುಷ್ಮಾ ಧಾಬಡೆ ದಂಪತಿ ಮಗ ಓಜಸ್'ನ ವಂದೇ ಮಾತರಂ ಹಾಡು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿದೆ. ದೀಪಕ, ಸುಷ್ಮಾಯವರು ಸಾಪ್ಟವೇರ ಇಂಜಿನಿಯರ್ ಆಗಿದ್ದು ಮಹಾರಾಷ್ಟ್ರದ ಪುಣೆಯಲ್ಲಿ ಕೆಲಸವನ್ನು ಮಾಡುತ್ತಿದ್ದಾರೆ. ಸ್ವಾತಂತ್ರ್ಯ ದಿನಾಚರಣೆ ಅಮೃತಮಹೋತ್ಸವ ಹಿನ್ನಲೆಯಲ್ಲಿ ತಮ್ಮ ಮಗನಿಗೆ ವಂದೇ ಮಾತರಂ ಹಾಡನ್ನು ಹಾಡಿಸಿ, ನಟನೆಯನ್ನು ಮಾಡಿಸಿ ದೇಶದ ಮೇಲಿನ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.
ವರದಿ : ಸಂತೋಷ ಬಡಕಂಬಿ.
PublicNext
14/08/2022 02:29 pm