ಬೀಜಿಂಗ್: ಚೀನಾದ ಝೆಜಿಯಾಂಗ್ ಪ್ರಾಂತ್ಯದ ಟೊಂಗ್‍ಕ್ಸಿಯಾಂಗ್‍ನಲ್ಲಿ 2 ವರ್ಷದ ಹೆಣ್ಣು ಮಗುವೊಂದು 5ನೇ ಮಹಡಿಯ ಕಿಟಕಿಯಿಂದ ಬೀಳುತ್ತಿತ್ತು. ಆಗ ರಸ್ತೆ ಪಕ್ಕದಲ್ಲಿ ಕಾರು ಪಾರ್ಕ್ ಮಾಡುತ್ತಿದ್ದ ಶೆನ್ ಡಾಂಗ್ ಎಂಬ ವ್ಯಕ್ತಿ ಮಗು ಬೀಳುತ್ತಿರುವುದನ್ನು ನೋಡಿದ್ದಾರೆ. ತಕ್ಷಣವೇ ಓಡಿ ಹೋಗಿ ಆ ಕಂದಮ್ಮನನ್ನು ರಕ್ಷಿಸಿದ್ದಾರೆ. ಶೆನ್ ಅದೇ ರಸ್ತೆಯ ಬ್ಯಾಂಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಮಗು ಬೀಳುವುದನ್ನು ನೋಡಿದ ಶೆನ್ ಮೊದಲು ತುರ್ತು ಸೇವಾ ಘಟಕಕ್ಕೆ ಕರೆ ಮಾಡಲು ಯತ್ನಿಸುತ್ತಾರೆ. ನಂತರ ಅವರೇ ಮಗುವನ್ನು ಕ್ಯಾಚ್ ಹಿಡಿದು ರಕ್ಷಿಸಿದ್ದಾರೆ.
ಈ ವೀರೋಚಿತ ದೃಶ್ಯಗಳನ್ನು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೊ ಲಿಜಿಯಾನ್ ಅವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ‘ನಮ್ಮ ಹೀರೋಗಳು’ ಎಂದು ಸರ್ಕಾರಿ ಅಧಿಕಾರಿ ಕಿರು ಕ್ಲಿಪ್ ಶೇರ್ ಮಾಡಿಕೊಳ್ಳುವಾಗ ಬರೆದುಕೊಂಡಿದ್ದಾರೆ.
ವಿಡಿಯೋ ನೋಡಿದವರು, ನಿಜವಾದ ಹೀರೋಗಳು ಕೇವಲ ಸಿನಿಮಾಗಳಲ್ಲಿ ಅಲ್ಲ ಎಂದು ಬರೆದಿದ್ದಾರೆ. ಲೆಜೆಂಡರಿ ಕ್ಯಾಚ್! ಆ ಇಬ್ಬರಿಗೆ ಪದಕ ಕೊಡಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಅವನ ಮನಸ್ಸು ಅದ್ಭುತ, ಅವರು ರಿಯಲ್ ಲೈಫ್ ಹೀರೋ, ರೀಲ್ ಲೈಫ್ ಅಲ್ಲ ಎಂದು ನೆಟ್ಟಿಗರು ಕಾಮೆಂಟ್ ಸುರಿಮಳೆಯನ್ನೆ ಸುರಿಸಿದ್ದಾರೆ.
PublicNext
24/07/2022 08:58 pm