ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ: ವಿಭಿನ್ನ ಸಾಮರ್ಥ್ಯವುಳ್ಳ ಬಾಲಕಿಯ ಆಸೆ ಈಡೇರಿಸಿದ ಐಜಿಪಿ.!

ದಾವಣಗೆರೆ: ಆಕೆಗೆ ಪೊಲೀಸ್‌ ಇಲಾಖೆ ಸಮವಸ್ತ್ರ ಧರಿಸಬೇಕು. ಐಜಿಪಿ ಅವರೊಂದಿಗೆ ಫೋಟೋ ತೆಗೆಸಿಕೊಳ್ಳಬೇಕೆಂಬ ಅದಮ್ಯ ಬಯಕೆ ಇತ್ತು‌. ಅದಕ್ಕಾಗಿ ಕೆಲ ವರ್ಷಗಳಿಂದಲೂ ಆಕೆ ಕನಸು ಕಂಡಿದ್ದಳು. ಕೊನೆಗೂ ಆ ಕ್ಷಣ ಬಂದೇ ಬಿಡ್ತು. ಖಾಕಿ ಧರಿಸಿದ ಆ ಬಾಲೆಯ ಮೊಗದಲ್ಲಿ ಮಂದಹಾಸ ಮೂಡಿಸಿತು.

ಅಂದ ಹಾಗೆ ಈ ಬಾಲಕಿ ವಿಭಿನ್ನ ಸಾಮರ್ಥ್ಯದಾಕೆ. ಈಕೆ ಹೆಸರು ಸಾಧನಾ ಎಂ. ಪಾಟೀಲ್. ಈ ಬಾಲೆಯ ಈ ಆಸೆ ಕೇಳಿದ ಪೂರ್ವ ವಲಯ ಐಜಿಪಿ ತ್ಯಾಗರಾಜನ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ. ಬಿ. ರಿಷ್ಯಂತ್ ಅವರು ಈಡೇರಿಸುವುದಾಗಿ ಆಕೆಯ ಕುಟುಂಬದವರಿಗೆ ಭರವಸೆ ನೀಡಿದ್ದರು.

ಅಂತೆಯೇ ಇಂದು ಪೂರ್ವ ವಲಯ ಪೊಲೀಸ್ ಮಹಾನಿರೀಕ್ಷಕರ ಕಚೇರಿಯಲ್ಲಿ ಇದಕ್ಕೆ ಅವಕಾಶ ನೀಡಲಾಯಿತು‌. ಸಾಧನಾ ಎಂ. ಪಾಟೀಲ್ ಕೋರಿಕೆಯ ಮೇರೆಗೆ ಖಾಕಿ ಉಡುಪಿನಲ್ಲಿ ಐಜಿಪಿ ತ್ಯಾಗರಾಜನ್ ಅವರ ಪಕ್ಕದ ಖುರ್ಚಿಯಲ್ಲಿ ಕುಳಿತು ಖುಷಿಪಟ್ಟಳು. ಪೊಲೀಸ್ ಟೋಪಿ ಧರಿಸಿ ಲಾಠಿ ಹಿಡಿದು ಸಂಭ್ರಮಪಟ್ಟಳು. ಜೊತೆಗೆ ತ್ಯಾಗರಾಜನ್ ಅವರೊಟ್ಟಿಗೆ ಫೋಟೋ ತೆಗೆದುಕೊಂಡು ಎಲ್ಲರಿಗೂ ಧನ್ಯವಾದ ಅರ್ಪಿಸಿದಳು.

Edited By : Vijay Kumar
PublicNext

PublicNext

14/07/2022 07:19 pm

Cinque Terre

24.07 K

Cinque Terre

1

ಸಂಬಂಧಿತ ಸುದ್ದಿ