ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜನ್ಮ ತಳೆದ ಕೂಡಲೇ ಪ್ರಾಣ ಬಿಟ್ಟ ಮೂರು ಕರುಗಳು

ತುಮಕೂರು: ಹುಟ್ಟಿದ್ದು ಮೂರು ಕರುಗಳಾದರೂ ಒಂದು ಕರು ಸಹ ಉಳಿಯಲಿಲ್ಲ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಹಸು, ಕರು ಹಾಕಿದೆ. ಆದರೆ ತಕ್ಷಣವೇ ಕರುಗಳು ಸಾವನ್ನಪ್ಪಿರುವ ಘಟನೆ ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹೋಬಳಿಯ ಕಳ್ಳಿಪಾಳ್ಯ ಗ್ರಾಮದಲ್ಲಿ ಶನಿವಾರ ನಡೆದಿದೆ.

ರಾಮಯ್ಯ ಎಂಬವರಿಗೆ ಸೇರಿದ ಸೀಮೆಹಸು ಮೂರು ಗಂಡು ಕರುಗಳಿಗೆ ಜನ್ಮ ನೀಡಿ ಕರುಗಳಿಗೆ ಉಸಿರಾಟದ ಸಮಸ್ಯೆ ಎದುರಾಗಿ ಮೂರು ಕರುಗಳು ಸಹ ಹುಟ್ಟಿದ ಕೆಲವೇ ನಿಮಿಷಗಳಲ್ಲಿ ಮೃತಪಟ್ಟಿದೆ. ಘಟನಾ ಸ್ಥಳಕ್ಕೆ ಹೊಳವನಹಳ್ಳಿ ಸರ್ಕಾರಿ ಪಶು ಆಸ್ಪತ್ರೆಯ ವೈದ್ಯರ ಭೇಟಿ ನೀಡಿ ಜೀವಂತವಾಗಿರುವ ತಾಯಿ ಹಸುವಿಗೆ ಚಿಕಿತ್ಸೆಯೇನು ನೀಡಿದ್ದಾರೆ. 3 ಕರುಗಳಿಗೆ ಜನ್ಮ ನೀಡಿದ ಹಸುವಿನ ಸ್ಥಿತಿಯು ಸಹ ಚಿಂತಾಜನಕವಾಗಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.

Edited By : Nagaraj Tulugeri
PublicNext

PublicNext

09/07/2022 08:07 pm

Cinque Terre

57.61 K

Cinque Terre

1