ಇಸ್ಲಾಮಾಬಾದ್: 61 ವರ್ಷದ ವೃದ್ಧನನ್ನು 18 ವರ್ಷ ಯುವತಿಯು ಮದುವೆಯಾದ ಅಪರೂಪದ ಘಟನೆ ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ನಡೆದಿದೆ.
ಹೌದು ರಾವಲ್ಪಿಂಡಿ ನಿವಾಸಿ ರಾಣಾ ಶಂಶಾದ್ ತನ್ನ ವಯಸ್ಸಿಗಿಂತ 43 ವರ್ಷದ ಕಿರಿಯ ಆಶಿಯಾಳನ್ನು ಮದುವೆಯಾಗಿದ್ದಾರೆ. ಅಷ್ಟಕ್ಕೂ ಇಬ್ಬರ ನಡುವೆ ಪ್ರೀತಿ ಶುರುವಾಗಿದ್ದು ಹೇಗೆ? ಅನ್ನೋದನ್ನ ಆಶಿಯಾ ಯೂಟ್ಯೂಬ್ ಚಾನೆಲ್ ಒಂದಕ್ಕೆ ಮಾಹಿತಿ ನೀಡಿದ್ದಾರೆ.
ನಾವಿಬ್ಬರು ಒಂದೆರಡು ಬಾರಿ ಭೇಟಿಯಾದೇವು. ಸ್ಥಳೀಯರೂ ಅವರ (ರಾಣಾ) ಬಗ್ಗೆ ಒಳ್ಳೆಯ ಮಾತುಗಳನ್ನಾಡುತ್ತಿದ್ದರು. ನಂತರ ನಾನು ಅವರನ್ನ ಮದುವೆ ಆಗಲು ನಿರ್ಧರಿಸಿದೆ ಎಂದು ಹೇಳಿದ್ದಾಳೆ. ಇನ್ನು ರಾಣಾ ಪ್ರತಿಕ್ರಿಯಿಸಿ, ಈ ವಯಸ್ಸಿನಲ್ಲಿ ಜೀವನ ಸಂಗಾತಿ ಸಿಕ್ಕಿರುವುದು ನನ್ನ ಅದೃಷ್ಟ. ಆಶಿಯಾ ನನ್ನ ಬಗ್ಗೆ ತುಂಬಾ ಕಾಳಜಿ ವಹಿಸುತ್ತಾಳೆ ಎಂದಿದ್ದಾರೆ.
ಇನ್ನು ಇವರೆ ಮದುವೆಗೆ ಸಂಬಂಧಿಕರಿಂದ ವಿರೋಧ ವ್ಯಕ್ತವಾಗಿತ್ತಂತೆ. ಹೀಗಿದ್ದೂ ವಿರೋಧದ ನಡುವೆಯೇ ಅವರು ಮದೆಯಾಗಿ, ಹೊಸ ಜೀವನ ಆರಂಭಿಸಿದ್ದಾರೆ. ಸಂಬಂಧಿಕರು ಏನಾದರೂ ಹೇಳುತ್ತಲೇ ಇರುತ್ತಾರೆ. ಜನರು ಮಾತನಾಡುವುದನ್ನು ತಡೆಹಿಡಿಯಲು ಆಗುವುದಿಲ್ಲ ಎಂದು ವಧು ಹೇಳಿದ್ದಾರೆ.
PublicNext
01/07/2022 10:48 pm