ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳನ ಅಂಗಳದಲ್ಲಿ ಕಣ್ಣು ಹೋಲುವ ದೃಶ್ಯ-ಪೋಟೋ ವೈರಲ್

ಮಂಗಳನ ಅಂಗಳದಲ್ಲಿ ಮಾನವನ ಕಣ್ಣು ಹೋಲುವ ಚಿತ್ರ ಸೆರೆಯಾಗಿದೆ. ಹೌದು. ಈ ಒಂದು ಚಿತ್ರ ಈಗ ಭಾರೀ ಕುತೂಹಲ ಮೂಡಿಸಿದೆ.

ಯುರೋಪಿಯನ್ ಸ್ಪೇಷ್ ಏಜೆನ್ಸಿ ಇತ್ತೀಚಿಗೆ ಈ ಒಂದು ಫೋಟೋವನ್ನ ಬಿಡುಗಡೆ ಮಾಡಿದೆ. ಮಂಗಳ ಗೃಹದ ದಕ್ಷಿಣ ಭಾಗದಲ್ಲಿಯೇ ಇರೋ ಅಯೋನಿಯಾ ಟೆರ್ರಾ ಎಂಬ ಪ್ರದೇಶದಲ್ಲಿ ಮಾನವನ ಕಣ್ಣಿನಾಕಾರದ ಈ ಒಂದು ರಚನೆ ಕಂಡು ಬಂದಿದೆ.

ಹೆಚ್ಚು ಕಡಿಮೆ ಸುಮಾರು 30 ಕಿ.ಲೋಮೀಟರ್ ಅಗಲದಲ್ಲಿ ಮಾನವನ ಕಣ್ಣು ಹೋಲುವ ಈ ಒಂದು ರಚನೆ ಕಂಡು ಬಂದಿದೆ. 3.54 ಶತಕೋಟಿ ವರ್ಷಗಳ ಹಿಂದೆ ಮಂಗಳ ಗೃಹದ ಮೇಲೆ ನೀರಿನ ಚಲನೆಯಿಂದ ಈ ಒಂದು ರಚನೆ ಆಗಿರಬಹುದು ಎಂದು ಖಗೋಳ ಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.

Edited By :
PublicNext

PublicNext

14/06/2022 07:58 am

Cinque Terre

42.63 K

Cinque Terre

0