ತಾನೇ ಜನ್ಮನೀಡಿದ ತಾಯಿ ಹುಲಿ ಮರಿಗಳಿಗೆ ಹಾಲುಣಿಸದನ್ನು ನಿರಾಕರಿಸಿ ದೂರ ಮಾಡಿದ್ರೂ, ಸಹ ಶ್ವಾನಯೊಂದು ಆ ಮರಿ ಹುಲಿ ಮರಿಗಳಿಗೆ ಹಾಲುಣಿಸಿ ತಾಯಿ ಪ್ರೀತಿ ಮಮತೆ ತೋರಿದೆ.
ಹೌದು ! ಇಂಥದ್ದೊಂದು ವಿಡಿಯೋ ಈಗಾಗಲೇ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದ್ದು, @apiecofnature ಎಂಬುವವರು ಟ್ವಿಟರ್'ನಲ್ಲಿ ಈ ವಿಡಿಯೋ ಅಪ್ಲೋಡ್ ಮಾಡಿದ್ದು ನೆಟ್ಟಿಗರು ಸಹ ಫುಲ್ ಫಿದಾ ಆಗಿದ್ದಾರೆ.
ಇನ್ನೂ ಮುಖ್ಯವಾಗಿ ಹುಲಿ ಮರಿಗಳಿಗೆ ಹಾಲುಣಿಸುತ್ತಿರುವ ಶ್ವಾನದ ಬಗ್ಗೆ ಎಲ್ಲರಿಗೂ ಕುತೂಹಲ ಮೂಡಿಸಿದ್ದು, ಇದು ಲ್ಯಾಬ್ರಡೋರ್ ತಳಿಯ ಶ್ವಾನವಾಗಿದ್ದು ಹುಲಿ ಮೂರು ಮರಿಗಳಿಗೆ ಹಾಲುಣಿಸುತ್ತಿದೆ. ಈ ಶ್ವಾನದ ಇನ್ನೊಂದು ವಿಶೇಷತೆ ಎನೆಂದ್ರೇ ಕೋವಿಡ್ ಸೋಂಕಿತರನ್ನು ಸಹ ಪತ್ತೆ ಮಾಡುವಂತಹ ಸಾಮರ್ಥ್ಯ ಹೊಂದಿದೆ.
ಒಟ್ಟಾರೆ ತಾಯಿಯಿಂದ ದೂರವಾದ ದೂರವಾದ ವ್ಯಾಘ್ರನ ಮರಿಗಳಿಗೂ ಶ್ವಾನ ಹಾಲುಣಿಸುವ ಮಮತೆ ನಿಜಕ್ಕೂ ಮೆಚ್ಚುವಂತಹದು ಹಾಗೂ ಪ್ರಾಣಿಗಳಿಲ್ಲಿರುವ ಈ ಅನ್ಯೋನ್ಯತೆ ಅವಿನಾಭಾವ ಎಂಬ ಪ್ರಶಂಸೆ ಮಾತುಗಳು ಸಹ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿವೆ.
PublicNext
18/05/2022 04:18 pm