ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸೆರೆ ಹಿಡಿಯಲು ಬಂದವರ ಮೇಲೆ ಅಟ್ಯಾಕ್ ಮಾಡಿದ ಚಿರತೆ-ಮುಂದೇನ್ ಆಯಿತು ?

ಪಾಣಿಪತ್: ಹರಿಯಾಣದ ಪಾಣಿಪತ್ ನಲ್ಲಿ ಚಿರತೆ ಹಾವಳಿ ಹೆಚ್ಚಾಗಿತ್ತು. ಇದರ ಕಾಟಕ್ಕೆ ಭಯಗೊಂಡ ಜನ ಪೊಲೀಸರಿಗೆ ದೂರು ಕೊಟ್ಟರು. ಅರಣ್ಯ ಇಲಾಖೆಗೂ ವಿಷಯ ತಿಳಿಸಿದರು. ಆಗಲೇ ನೋಡಿ ಇಲ್ಲೊಂದು ಘಟನೆ ನಡೆದೇ ಹೋಯಿತು.

ಪಾಣಿಪತ್ ನಲ್ಲಿ ಚಿರತೆ ಹಿಡಿಯಲು ಅಂದು ರಾತ್ರಿ ಅರಣ್ಯ ಇಲಾಖೆ ಸಿಬ್ಬಂದಿ ಬಂದಿದ್ದರು. ಅಷ್ಟೇ ಯಾಕೆ ಪೊಲೀಸರು ಕೂಡ ಇಲ್ಲಿ ಹಾಜರಿದ್ದರು.ಆದರೆ, ಯಾರ್ ಬಂದ್ರ ಏನೂ ? ಚಿರತೆ ಸರಿಯಾಗಿಯೇ ಆಟ ಆಡಿಸಿದೆ. ಮತ್ತೆ ಮತ್ತೆ ಹಿಡಿಯಲು ಬಂದ ಪೊಲೀಸ್ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಅಟ್ಯಾಕ್ ಕೂಡ ಮಾಡಿ ಬಿಟ್ಟಿದೆ.

ಚಿರತೆ ಅಟ್ಯಾಕ್ ಮಾಡಿದರೂ ಸಿಬ್ಬಂದಿ ಬಿಟ್ಟಿಯೇ ಇಲ್ಲ. ಧೈರ್ಯದಿಂದಲೇ ಅದನ್ನ ಎದುರಿಸಿದ್ದಾರೆ. ಅದೇ ಧೈರ್ಯದಲ್ಲಿಯೇ ಚಿರತೆಯನ್ನೂ ಹಿಡಿದು ಬೋನ್‌ಗೆ ಹಾಕಿದ್ದಾರೆ. ಆದರೆ ಈ ಒಂದು ಘಟನೆಯಲ್ಲಿ ಸಿಬ್ಬಂದಿಗೆ ಯಾವುದೇ ರೀತಿಯ ಗಂಭೀರ ಗಾಯಗಳು ಆಗಿಲ್ಲ. ಇನ್ನು ಈ ಒಂದು ಸಾಹಸ ಕ್ಷಣದ ವೀಡಿಯೋ ವೈರಲ್ ಆಗಿದ್ದು, ಪಾಣಿಪತ್ ನ ಎಸ್‌ಪಿ ಶಶಾಂಕ್ ಈ ವೀಡಿಯೋ ಶೇರ್ ಮಾಡಿದ್ದಾರೆ. ಸಿಬ್ಬಂದಿ ಧೈರ್ಯವನ್ನ ಕೊಂಡಾಡಿದ್ದಾರೆ.

Edited By :
PublicNext

PublicNext

09/05/2022 08:55 pm

Cinque Terre

74.41 K

Cinque Terre

2