ಒಡಿಶಾ: ಆಕೆ ಮೇಲೆ ಆಸಿಡ್ ದಾಳಿ ಆಗುತ್ತದೆ. 16 ನೇ ವಯಸ್ಸಿನಲ್ಲಿಯೇ ಜೀವನ ದುಸ್ತರ ಆಗಿ ಬಿಡುತ್ತದೆ.ಆಸಿಡ್ ದಾಳಿಯಿಂದ ಮುಖ ಸುಟ್ಟು ಹೋಗುತ್ತದೆ. ದೃಷ್ಟಿ ಕೂಡ ಹೋಗಿ ಬಿಡುತ್ತದೆ. ಆದರೆ ಆಕೆ ಜೀವನದಲ್ಲಿ ಬಂದ ಆ ಹುಡುಗಿ ಈಕೆಯ ಬಾಳಿನ ಬೆಳಕಾಗಿದ್ದಾನೆ.ಬನ್ನಿ,ಹೇಳ್ತವಿ.
ಕಾಲೇಜಿನಿಂದ ಬರೋವಾಗ ಪ್ರಮೋದಿ ರೌಲ್ ಹೆಸರಿನ ಹುಡುಗಿ ಮೇಲೆ ಹುಡುಗನೊಬ್ಬ ಆಸಿಡ್ ದಾಳಿ ಮಾಡ್ತಾನೆ.ಇದರಿಂದ ಆಕೆ ದೇಹದ 80 ರಷ್ಟು ಭಾಗ ಸುಟ್ಟು ಹೋಗುತ್ತದೆ. ಹತ್ತು ವರ್ಷದ ಬಳಿಕ ಒಬ್ಬ ಯುವಕ ಈ ಹುಡುಗಿ ಜೀವನದಲ್ಲಿ ಪ್ರವೇಶ ಮಾಡ್ತಾನೆ. ಆತನೇ ಸರೋಜ್ ಸಾಹು.
ಆಸ್ಪತ್ರೆಯಲ್ಲಿ ಒಂದು ದಿನ ಸರೋಜ್ ಸಾಹು ಬಂದು ಪ್ರಮೋದಿನಿಯನ್ನ ನರ್ಸ್ ಮೂಲಕ ಭೇಟಿ ಆಗ್ತಾನೆ. ಆ ಬಳಿಕ ಸರೋಜ್ ಪ್ರಮೋದಿನಿಯನ್ನ ಆಗಾಗ ನೋಡಲು ಬರುತ್ತಾನೆ. ಅಲ್ಲಿಂದ ಶುರುವಾದ ಇವರ ಪ್ರೇಮ ಮದುವೆ ಹಂತಕ್ಕೂ ಬಂದಿದೆ.ಈ ಜೋಡಿ ಮದುವೆನೂ ಆಗಿದೆ. ಜೊತೆಗೆ ಪ್ರೀತಿ ಎಂಬುದು ದೇಹವನ್ನ ನೋಡಿ ಅಲ್ಲ. ಅಂತರಂಗವನ್ನ ನೋಡಿಯೇ ಮಾಡಬೇಕು ಅನ್ನೋದನ್ನ ಈ ಜೋಡಿ ಸಾರಿ ಸಾರಿ ಹೇಳುತ್ತಿದೆ.
PublicNext
15/02/2022 10:45 pm