ಮಂಡ್ಯ: ಮಗನ ಸಾವಿನ ಸುದ್ದಿ ಕೇಳಿ ಹೃದಯಾಘಾತದಿಂದ ತಾಯಿ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಗ್ರಾಮದಲ್ಲಿ ನಡೆದಿದೆ.
ನಾಗಮಂಗಲ ತಾಲೂಕಿನ ಗಿಡುವಿನ ಹೊಸಹಳ್ಳಿ ಕೊಪ್ಪಲಿಯ ನಿವಾಸಿಗಳಾದ ಲಕ್ಷ್ಮಮ್ಮ (69) ಹಾಗೂ ಕುಶಾಲ್ (45) ಮೃತ ತಾಯಿ-ಮಗ. ನಿನ್ನೆ (ಭಾನುವಾರ) ಮನೆಯಲ್ಲಿ ಟಿವಿ ನೋಡುತ್ತಿದ್ದ ವೇಳೆ ಕುಶಾಲ್‌ಗೆ ಲೋ ಬಿಪಿ ಹೆಚ್ಚಾಗಿದೆ. ನಂತರ ಆತನನ್ನ ಸ್ಥಳೀಯರು ಮನೆಯಿಂದ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಎತ್ತಿಕೊಂಡು ಬಂದಿದ್ದಾರೆ. ಅಷ್ಟರೊಳಗೆ ಕುಶಾಲ್ ಪ್ರಾಣಬಿಟ್ಟಿದ್ದ. ಈ ವೇಳೆ ಅಮ್ಮ, ಲಕ್ಷ್ಮಮ್ಮ ಮಗನನ್ನ ನೋಡಲು ಓಡಿ ಬಂದಿದ್ದಾಳೆ. ಮಗನ ಸಾವನ್ನ ನೋಡಿದ ತಾಯಿಗೂ ಹೃದಯಾಘಾತವಾಗಿದೆ.
ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
PublicNext
24/01/2022 12:23 pm