ಮುಂಬಯಿ: ಜಗತ್ಪ್ರಸಿದ್ಧ ಉದ್ಯಮಿಗಳು, ರಾಜಕಾರಣಿಗಳು, ತಾರೆಯರು, ಸೆಲೆಬ್ರಿಟಿಗಳ ಮಾತು ಹಾಗಿರಲಿ. ಜನಸಾಮಾನ್ಯರು ಕೂಡ ಇಂದು ತಮ್ಮ ಹುಟ್ಟುಹಬ್ಬವನ್ನು ಎಷ್ಟೊಂದು ಅದ್ಧೂರಿಯಾಗಿ ಆಚರಿಸುತ್ತಾರೆಂಬುದು ನಮಗೆಲ್ಲ ತಿಳಿದೇ ಇದೆ.
ಟಾಟಾ ಸಮೂಹದ ದಿಗ್ಗಜ, ಮಾನವೀಯ ಹೃದಯದ ರತನ್ ಟಾಟಾ ಅವರ ಹೆಸರು ಎಲ್ಲರಿಗೂ ಚಿರಪರಿಚಿತ. ಅವರು ಡಿ.28ರಂದು 84ನೇ ವಸಂತಕ್ಕೆ ಕಾಲಿಟ್ಟರು.
ಅಂದು ಈ ಅತಿ ಸಿರಿವಂತ ವ್ಯಕ್ತಿ ತಮ್ಮ ಹುಟ್ಟುಹಬ್ಬವನ್ನು ವೆರಿ ವೆರಿ ಸಿಂಪಲ್ಲಾಗಿ ಆಚರಿಸಿಕೊಂಡಿದ್ದಾರೆ. ಹೌದು, ಅವರ ಕಚೇರಿಯ ಯಾವುದೋ ಒಂದು ಆವರಣ, ಅಲ್ಲೊಂದು ಕಪ್ ನಲ್ಲಿ ಸಣ್ಣ ಕೇಕ್ ಇಟ್ಟಿದ್ದಾರೆ. ಶಂತನು ನಾಯ್ಡು ಎಂಬ ಯುವ ಉದ್ಯೋಗಿ ಜೊತೆಗಿದ್ದಾರೆ. ಈ ಯುವಕ ಕೇಕ್ ತುಂಡೊಂದನ್ನು ಟಾಟಾರಿಗೆ ತಿನ್ನಿಸುತ್ತಾರೆ. ಅಲ್ಲಿಗೇ ಈ ವಿಶ್ವವಿಖ್ಯಾತ 'ಉದ್ಯಮಿ ರತ್ನ'ನ ಬರ್ತ್ ಡೇ ಆಚರಣೆ ಮುಗಿದೇ ಹೋಯಿತು!
ಬಹುತಾರಾ ಹೋಟೆಲ್, ಲಕ್ಷ ವೆಚ್ಚದ ಭಾರಿ ತೂಕದ ಕೇಕ್, ಗಣ್ಯಾತಿ ಗಣ್ಯರ ದಂಡು, ಎಲ್ಲೆಡೆ ಅದ್ಧೂರಿತನ...ಇವೆಲ್ಲ ಇಲ್ಲಿ ಶೂನ್ಯ! ಹೀಗೆ ಸರಳಾತಿ ಸರಳವಾಗಿ ತಮ್ಮ ಜನ್ಮದಿನ ಆಚರಿಸಿದರು ಈ ಮಹನೀಯ.
PublicNext
31/12/2021 10:49 am