ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗಿನ್ನಿಸ್ ದಾಖಲೆಗೆ ತಲೆ ಉಪಯೋಗಿಸಿದ ತಲೆಗಾರರು

ತಲೆ ಮೇಲೆ ನೆಟ್ಟಗೆ ಏನೂ ನಿಲ್ಲೋದಿಲ್ಲ.ಆದರೆ ಇಲ್ಲಿ ಸಹೋದರರಿಬ್ಬರು ತಮ್ಮ ತಲೆಯನ್ನ ಬಳಸಿಕೊಂಡೇ ಒಂದು ಸಾಹಸ ಮಾಡಿದ್ದಾರೆ. ಅದು ಈಗ ಗಿನ್ನೀಸ್ ದಾಖಲೆನೂ ಆಗಿದೆ. ಬನ್ನಿ, ಹೇಳ್ತೀವಿ.

ಕೇವಲ 53 ಸೆಕೆಂಡ್‌ಗಲ್ಲಿ ಒಬ್ಬನ ತಲೆ ಮೇಲೆ ಮತ್ತೊಬ್ಬ ತಲೆ ಇಟ್ಟು 100 ಮೆಟ್ಟಿಲೇರಿದ್ದಾರೆ ಈ ಸಹೋದರರು. ವಿಶೇಷ ಅಂದ್ರೆ ತಮ್ಮ ದಾಖಲೆಯನ್ನ ಈ ಮೂಲಕ ತಾವೇ ಮುರಿದಿದ್ದಾರೆ.

ಹೌದು. ಇವರ ಈ ಗಿನ್ನೀಸ್ ದಾಖಲೆ ಸಾಕ್ಷಿ ಆಗಿರೋದು ಸ್ಪೇನ್. ಇಲ್ಲಿಯ ಸೆಂಟ್ ಮೆರೀಸ್ ಕ್ಯಾಥ್ರೋಡ್‌ನ ಚರ್ಚ್ ನ ಹೊರ ಭಾಗದಲ್ಲಿಯೇ ಇವರು ಚಮತ್ಕಾರ ಮಾಡಿದ್ದಾರೆ.

ಅಲ್ಲದೇ ಪ್ರತಿ ದಿನ ಇದೇ ಚರ್ಚ್‌ ನಲ್ಲಿ ಅಭ್ಯಾಸ ಮಾಡುತ್ತಿದ್ದ ಈ ಸಹೋದರರು,ಈ ಹಿಂದೆ ಇದೇ ರೀತಿ 2016 ರಲ್ಲಿ 52 ಸೆಕೆಂಡ್‌ ನಲ್ಲಿ 90 ಮೆಟ್ಟಿಲೇರಿದ್ದರು. ಆದರೆ ಇವರ ಈ ಸಾಧನೆಗಾಗಿಯೇ ಚರ್ಚ್‌ ನವರು ಇನ್ನೂ ಹತ್ತು ಮೆಟ್ಟಿಲುಗಳನ್ನ ನಿರ್ಮಿಸಿ ಗಿನ್ನಿಸ್ ದಾಖಲೆಗೆ ನೆರವಾಗಿದ್ದಾರೆ.

ಅಂದ್ಹಾಗೆ ಈ ಸಹೋದರರ ಹೆಸರು ಗಿಯಾಂಗ್ ಕ್ವೋಕ್ ಕೋ ಮತ್ತು ಗಿಯಾಂಗ್ ಕ್ವೋಕ್ ಕೋ ಎನ್ಘಿಪ್‌. ಇವರ ಸಾಧನೆ ಈ ವೀಡಿಯೋ ಈಗ ಯುಟ್ಯೂಬ್‌ ನಲ್ಲೂ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

Edited By : Nagesh Gaonkar
PublicNext

PublicNext

29/12/2021 11:23 am

Cinque Terre

55.94 K

Cinque Terre

4