ಭೋಪಾಲ್: ಸುಮಾರು 80 80 ಅಡಿ ಆಳದ ಕೊಳವೆ ಬಾವಿಗೆ ಬಿದ್ದ ಒಂದು ವರ್ಷದ ಹೆಣ್ಣು ಮಗುವನ್ನು ಪೊಲೀಸರು ಮತ್ತು ರಾಜ್ಯ ವಿಪತ್ತು ತುರ್ತು ಮೀಸಲು ಪಡೆ (ಎಸ್ ಡಿಇಆರ್ ಎಫ್) ರಕ್ಷಿಸಿದ ಘಟನೆ ಮಧ್ಯಪ್ರದೇಶದ ಛತರ್ ಪುರದಲ್ಲಿ ನಡೆದಿದೆ.
ಗುರುವಾರ ಮಧ್ಯಾಹ್ನ 3.30ರ ಹೊತ್ತಿಗೆ ಕೊಳವೆ ಬಾವಿಗೆ ಬಿದ್ದ ದಿವ್ಯಾಂಶಿ ಎಂಬ ಮಗುವನ್ನು ಸುಮಾರು 10 ಗಂಟೆ ಕಾರ್ಯಾಚರಣೆ ನಡೆಸಿ ರಕ್ಷಿಸಲಾಗಿದೆ.
ಸದ್ಯ ಮಗು ಸ್ಥಿತಿ ಸ್ಥಿರವಾಗಿದೆ. ಮಗು ಬೋರ್ ವೆಲ್ ನಲ್ಲಿ ಸಿಲುಕಿಕೊಂಡಾಗ ಸಿಲಿಂಡರ್ ಮೂಲಕ ಆಮ್ಲಜನಕ ಪೂರೈಕೆ ಮಾಡಲಾಗಿತ್ತು ಎಂದು ವೈದ್ಯರು ತಿಳಿಸಿದ್ದಾರೆ.
'ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಿದೆ. ಮಗುವನ್ನು ಕೊಳವೆ ಬಾವಿಯಿಂದ ಸುರಕ್ಷಿತವಾಗಿ ಹೊರ ತರಲಾಗಿದೆ. ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ' ಎಂದು ಛತ್ತರ್ಪುರ ಜಿಲ್ಲಾಧಿಕಾರಿ ಟ್ವೀಟ್ ಮಾಡಿದ್ದಾರೆ.
PublicNext
17/12/2021 07:57 am