ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುತಾತ್ಮ ಲ್ಯಾನ್ಸ್ ನಾಯಕ್ ಸಾಯಿತೇಜ್ ಪಾರ್ಥಿವ ಶರೀರ ಬೆಂಗಳೂರಿಗೆ

ಬೆಂಗಳೂರು ತಮಿಳುನಾಡಿನಲ್ಲಿ ಇಂಡಿಯನ್ ಏರ್ಫೋರ್ಸ್ ಹೆಲೆಕ್ಯಾಪ್ಟರ್ ದುರಂತದಲ್ಲಿ ಹುತಾತ್ಮನಾದ ಲ್ಯಾನ್ಸ್ ನಾಯಕ್ ಬಿ.ಸಾಯಿತೇಜ ಪಾರ್ಥಿವ ಶರೀರ ಇಂದು ಯಲಹಂಕದ ವಾಯುನೆಲೆಗೆ ಆಗಮಿಸಿದಾಗ ಏರ್ಪೋರ್ಸ್ ನಹಿರಿಯ ಅಧಿಕಾರಿಗಳು ಪಾರ್ಥಿವ ಶರೀರವನ್ನು ಬರಮಾಡಿಕೊಂಡರು.

ಸಾಯಿ ತೇಜ‌ ಪಾರ್ಥಿವ ಶರೀರವನ್ನು ಐದು ನಿಮಿಷಗಳ ಕಾಲ ಯಲಹಂಕ ಏರ್ಪೋರ್ಸ್ ನಲ್ಲೆ ಇಟ್ಟು ಗೌರವ ಸಲ್ಲಿಸಲಾಯಿತು. ನಂತರ ಯಲಹಂಕದಿಂದ ನಗರದ ಕಮ್ಯಾಂಡೋ ಆಸ್ಪತ್ರೆಗೆ ಲ್ಯಾನ್ಸ್ ನಾಯಕ್ ಸಾಯಿತೇಜ ಪಾರ್ಥಿವ ಶರೀರವನ್ನು ಸಾಗಿಸಲಾಯಿತು.

ಇಂದು ಪಾರ್ಥಿವ ಶರೀರವನ್ನು ಬೆಂಗಳೂರಿನ ಕಮ್ಯಾಂಡೋ ಆಸ್ಪತ್ರೆಯಲ್ಲಿಡಲಾಗುವುದು. ನಾಳೆ ಏರ್ಪೋರ್ಸ್ ನ ಹಿರಿಯ ಅಧಿಕಾರಿಗಳ ಸಮಕ್ಷಮದಲ್ಲಿ ಸಾಯಿತೇಜ ಪಾರ್ಥಿವ ಶರೀರವನ್ನು ಆಂದ್ರಪ್ರದೇಶದ ಚಿತ್ತೂರು ಜಿಲ್ಲೆಯ ಮದನಪಲ್ಲಿಗೆ ರವಾನಿಸಲಾಗುವುದು .ಇದಕ್ಕೆ ಪೂರಕವಾಗಿ ಹಿರಿಯ ಅಧಿಕಾರಿಗಳು ಸಕಲ‌ ಸಿದ್ಧತೆ ನಡೆಸಿಕೊಂಡಿದ್ದಾರೆ.

ನಾಳೆ ಸಾಯಿತೇಜ ತವರೂರಿನಲ್ಲಿ ಅಂತಿಮ‌ವಿಧಿವಿಧಾನ ನೆರವೇರಲಿದೆ.

Edited By :
PublicNext

PublicNext

11/12/2021 02:27 pm

Cinque Terre

75.31 K

Cinque Terre

6

ಸಂಬಂಧಿತ ಸುದ್ದಿ