ದೆಹಲಿ: ಭಾರತದಲ್ಲಿರೋ ಪ್ರತಿಯೊಬ್ಬ ಯೋಧನೂ ಒಂದೊಂದು ಶಕ್ತಿನೇ ಆಗಿದ್ದಾರೆ. ಎಂತಹ ಕಷ್ಟದಲ್ಲೂ ಕೂಡ ಎದೆಯೊಡ್ಡಿ ನಮ್ಮನ್ನ ರಕ್ಷಿಸುತ್ತಾರೆ. ಅಂತಹ ವೀರ ಯೋಧ ಬ್ರಿಗೆಡಿಯರ್ ಲಖ್ವಿಂದರ್ ಸಿಂಗ್ ಲಿಡ್ಡರ್. ಇವರು ತಮ್ಮ ವಿಶೇಷ ವ್ಯಕ್ತಿತ್ವದಿಂದಲು ಇನ್ನೂ ಜೀವಂತ. ಇವರನ್ನ ಕಳೆದುಕೊಂಡ ಪತ್ನಿ ಗೀತಿಕಾ ಲಿಡ್ಡರ್ ಮಾತು ಕೇಳಿದ್ರೆ ನಿಮಗೂ ಶೌರ್ಯದ ಆ ಒಂದು ಪವರ್ ಪಾಸ್ ಆಗಿ ಬಿಡುತ್ತದೆ.
ತಮಿಳಿನು ನಾಡಿನಲ್ಲಿ ಮಿಲಿಟರಿ ಹೆಲಿಕಾಪ್ಟರ್ ದುರಂತ ಅನೇಕ ವೀರ ಯೋಧರನ್ನ ಕಸಿದುಕೊಂಡು ಬಿಟ್ಟಿದೆ. ಒಬ್ಬರಲ್ಲ ಇಬ್ಬರಲ್ಲ ಹೆಚ್ಚು ಕಡಿಮೆ 13 ಜನ ದುರಂತ ಸಾವು ಕಂಡಿದ್ದಾರೆ. ಆದರೆ ಇವರ ಶೌರ್ಯಕ್ಕೆ ಯಾರೂ ಸಾಟಿ ಇಲ್ಲಿ ಬಿಡಿ. ಇವರನ್ನ ಕೆಳೆದು ಕೊಂಡವರ ಕುಟುಂಬದ ಧೈರ್ಯವನ್ನ ನಾವು-ನೀವೂ ಸ್ಮರಿಸಲೇಬೇಕು.ಕೊಂಡಾಡಲೇಬೇಕು.
ಹೌದು. ಹೆಲಿಕ್ಯಾಪ್ಟರ್ ದುಂತರದಲ್ಲಿ ಮೃತಪಟ್ಟ ಬ್ರಿಗೆಡಿಯರ್ ಲಖ್ವಿಂದರ್ ಸಿಂಗ್ ಲಿಡ್ಡರ್ ಅಂತ್ಯ ಕ್ರಿಯೆ ದೆಹಲಿಯ ಬ್ರಾರ್ ಸ್ಕ್ವರ್ ನಲ್ಲಿ ನಡೆದಿದೆ. ಇದೇ ವೇಳೆ ಲಿಡ್ಡರ್ ಪತ್ನಿ ಗೀತಿಕಾ ಲಿಡ್ಡರ್ ಮಾತನಾಡಿದ್ದಾರೆ. ಪತಿಯ ಅಗಲಿಕೆಯ ನೋವು ಮನದಲ್ಲಿದ್ದರೂ ಕೂಡ ಆ ನೋವು ಹೆಮ್ಮೆಯಾಗಿ ಇಲ್ಲಿ ಗುಂಡಿನಂತೆ ಕೇಳುತ್ತವೆ.
ಲಿಡ್ಡರ್ ಒಬ್ಬ ಹಸ್ಮುಖಿ ವ್ಯಕ್ತಿ. ಅವರು ಒಬ್ಬ ವೀರಯೋಧ ಆಗಿದ್ದರು. ಎಲ್ಲರೊಟ್ಟಿಗೆ ಬೆರೆಯುತಿದ್ದ ವ್ಯಕ್ತಿ. ರಿಯಲ್ ಸೋಲ್ಜರ್ ಅಂತಲೇ ಹೇಳಿ ಹೆಮ್ಮೆಪಟ್ಟಿದ್ದಾರೆ. ಇದಲ್ಲವೇ ವೀರ ಯೋಧನ ಪತ್ನಿಯ ವೀರತ್ವದ ಮಾತು.ಇವರ ಮಾತು ನಿಜಕ್ಕೂ ಎಲ್ಲರಿಗೂ ಸ್ಪೂರ್ತಿನೇ ಆಗಿದೆ.
PublicNext
10/12/2021 04:17 pm