ಬೆಂಗಳೂರು: ಬರಹಗಾರ್ತಿ, ಇನ್ಫೋಸಿಸ್ ಫೌಂಡೇಷನ್ನ ಮುಖ್ಯಸ್ಥೆ ಸುಧಾಮೂರ್ತಿ ಅವರು ತಮ್ಮ ಮುದ್ದಿನ ನಾಯಿ ಗೋಪಿ ಬರ್ತ್ ಡೇ ಯನ್ನು ಮಾಡಿದ್ದಾರೆ.
ಇನ್ನು ಗೋಪಿಯನ್ನು ಹಾಡಿ ಹೊಗಳಿದ ಸುಧಮ್ಮ ಆರತಿ ಬೆಳಗುತ್ತ ‘ಗೋಪಣ್ಣ, ಹ್ಯಾಪಿ ಬರ್ತ್ ಡೇ’,‘ಅಂದವಂತನಾಗು, ಚಂದವಂತನಾಗು, ಆನೆಯ ಮೇಲೆ ಇರುವ ಅರಸ ನೀನಾಗು…’ಎಂದು ಹಾಡಿನಲ್ಲೇ ಹಾರೈಸುವ ವಿಡಿಯೋ ವೈರಲ್ ಆಗಿದೆ.
ಆರತಿ ಬೆಳಗುತ್ತ, ‘ಆರತಿ ಬೆಳಗಿರೆ ಪಾರ್ವತಿಗೆ’ ಎಂದು ಹಾಡಿದ ತಮ್ಮ ತಾಯಿಗೆ ಸುಧಾ ಮೂರ್ತಿ ಅವರು ‘ಅದು ಪಾರ್ವತಿ ಅಲ್ಲ, ಗೋಪಿ..’ ಎನ್ನುತ್ತಾರೆ.
PublicNext
06/12/2021 12:19 pm