ತೈವಾನ್: ಆಂಬ್ಯುಲೆನ್ಸ್ ಇರೋದು ತುರ್ತು ಸೇವೆಗಾಗಿಯೇ. ಆದರೆ ಇಲ್ಲೊಬ್ಬ ಮಹಾಶಯ ಅದನ್ನೇ ಫ್ರೀ ಟ್ಯಾಕ್ಸಿ ರೀತಿ ಉಪಯೋಗಿಸಿದ ಘಟನೆ ತೈವಾನ್ ನಲ್ಲಿ ಈಗ ಬಳಕಿಗೆ ಬಂದಿದೆ.
ತೈವಾನ್ ನಿವಾಸಿಯ ಹೆಸರೇನೂ ಅಂತ ಎಲ್ಲರೂ ರಿವೀಲ್ ಆಗಿಲ್ಲ.ಆದರೆ ಆತ ಆಂಬ್ಯುಲೆನ್ಸ್ ಅನ್ನ ಒಂದು ವರ್ಷದಲ್ಲಿ ಬರೋಬ್ಬರಿ 39 ಸಲ ಫ್ರೀ ಟ್ಯಾಕ್ಸಿ ರೀತಿಯೇ ಬಳಸಿಕೊಂಡಿದ್ದಾರೆ. ಹುಷಾರಿಲ್ಲ ಅಂತ ಆಂಬ್ಯುಲೆನ್ಸ್ ಗೆ ಫೋನ್ ಮಾಡುತ್ತಾನೆ. ತನ್ನ ಮನೆಯಿಂದ 200 ಮೀಟರ್ ದೂರದಲ್ಲಿರೋ ಸೂಪರ್ ಮಾರ್ಕೆಟ್ ಸಮೀಪದ ಆಸ್ಪತ್ರೆಗೂ ಬರುತ್ತಾನೆ.
ಆದರೆ ಈತ ಆಸ್ಪತ್ರೆಗೆ ಬಂದು ಚೆಕಪ್ ಕೂಡ ಮಾಡಿಸಿಕೊಳ್ಳೋದಿಲ್ಲ. ಹಾಗೆ ಹೇಳದೇ ಕೇಳದೆ ಹೋಗಿ ಬಿಡುತ್ತಾನೆ. ಆಸ್ಪತ್ರೆಯ ಸಿಬ್ಬಂದಿ ಇದನ್ನ ಗಮನಿಸಿ ಪೊಲೀಸರಿಗೂ ದೂರ ಕೊಟ್ಟಿದ್ದಾರೆ.ಈತನಿಗೆ ಪೊಲೀಸರು ಈಗ ಎಚ್ಚರಿಕೆಯನ್ನಷ್ಟೆ ನೀಡಿ ಕಳಿಸಿದ್ದಾರೆ.
PublicNext
28/11/2021 05:30 pm