ಹೈದ್ರಾಬಾದ್: ಇಂದಿನ ದಿನಗಳಲ್ಲಿ ತಮ್ಮ ಮಕ್ಕಳನ್ನ ಯಾರೂ ಅಂಗನವಾಡಿಗೆ ಕಳಿಸೋದೆ ಇಲ್ಲ.ಎಲ್‌ಕೆಜಿ,ಯುಕೆಜಿ ಅಂತಲೇ ಕಳಿಸಿ ಸ್ಟೇಟಸ್‌ಮೆಂಟೇನ್ ಮಾಡ್ತಾರೆ. ಆದರೆ ಇಲ್ಲೊಬ್ಬ ಜಿಲ್ಲಾಧಿಕಾರಿ ಇದ್ದಾರೆ. ತಮ್ಮ ಇಬ್ಬರು ಹೆಣ್ಣುಮಕ್ಕಳನ್ನ ಅಂಗನವಾಡಿ ಕಳುಹಿಸಿ ಎಲ್ಲರಿಗೂ ಮಾದರಿ ಆಗಿದ್ದಾರೆ.
ತೆಲಂಗಾಣದ ಕುಮಾರಭೀಮ ಆಸಿಫಬಾದ್ ನ ಜಿಲ್ಲಾಧಿಕಾರಿ ರಾಹುಲ್ ರಾಜ್ ಅವರು ತಮ್ಮ ಇಬ್ಬರು ಹೆಣ್ಣುಮಕ್ಕಳನ್ನ ಅಂಗನವಾಡಿಗೆ ಸೇರಿಸಿದ್ದಾರೆ. ನಿರ್ವಿಕಾರಾಜ್ ಮತ್ತು ರಿತ್ವಿಕಾರಾಜ್ ಎಲ್‌ಕೆಜಿ,ಯುಕೆಜಿ ಅಂತ ಹೋಗದೇನೆ ಅಂಗನವಾಡಿಯಲ್ಲಿಯೇ ಓದುತ್ತಿದ್ದಾರೆ. ಡಿಸಿಯ ಈ ಕೆಲಸಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
PublicNext
20/11/2021 07:41 pm