ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಚ್ಚ ಬಸ್ಯಾ ಇನ್ನಿಲ್ಲ : ಭಿಕ್ಷುಕನ ಅಂತ್ಯಕ್ರಿಯೆಯಲ್ಲಿ ಸಾವಿರಾರು ಜನ ಭಾಗಿ

ವಿಜಯನಗರ: ಭಿಕ್ಷುಕರನ್ನು ಕಂಡರೇ ಮರುಗುವವರ ಬದಲು ಗರಂ ಆಗುವವರೇ ಹೆಚ್ಚು. ಭಿಕ್ಷಾಟನೆ ಅಪರಾಧವು ಹೌದು. ಆದ್ರೆ ಇಲ್ಲೊಬ್ಬ ಭಿಕ್ಷುಕನ ನಿಧನಕ್ಕೆ ಇಡೀ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ. ಭಿಕ್ಷುಕನ ಅಂತ್ಯಕ್ರಿಯೆಯಲ್ಲಿ ಸಾವಿರಾರು ಜನ ಭಾಗವಹಿಸಿರುವುದು ಗಮನಾರ್ಹ.

ಹೌದು ವಿಜಯನಗರ ಜಿಲ್ಲೆಯ ಹಡಗಲಿ ಪಟ್ಟಣದ ಭಿಕ್ಷುಕ ಹುಚ್ಚ ಬಸ್ಯಾ ಒಬ್ಬರಿಂದ ಕೇವಲ 1 ರೂ. ಭಿಕ್ಷೆ ಪಡೆಯುತ್ತಿದ್ದ, ಒಂದು ವೇಳೆ ಹೆಚ್ಚು ಹಣ ನೀಡಿದ್ರೆ ಚಿಲ್ಲರೆ ವಾಪಸ್ ಕೊಡುತ್ತಿದ್ದನು. ಹಾಗಾಗಿ ಹಡಗಲಿಯಲ್ಲಿ ಹುಚ್ಚ ಬಸ್ಯಾ ಅಂದ್ರೆ ಎಲ್ಲರಿಗೂ ಚಿರಪರಿಚಿತ.ಕೆಲ ದಿನಗಳ ಹಿಂದೆ ಹುಚ್ಚ ಬಸ್ಯಾ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದನು. ಸಾರ್ವಜನಿಕರು ಆತನನ್ನು ಆಸ್ಪತ್ರೆಗೂ ದಾಖಲಿಸಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಸಾವನ್ನಪ್ಪಿದ್ದಾನೆ.

ಭಿಕ್ಷುಕ ಬಸ್ಯಾನ ಶವವನ್ನು ವಾದ್ಯ ಮೇಳದೊಂದಿಗೆ ಮೆರವಣಿ ಮಾಡಿ ಅಂತ್ಯಕ್ರಿಯೆ ಯಾವ ಗಣ್ಯ ವ್ಯಕ್ತಿಗಿಂತ ಕಡಿಮೆ ಇಲ್ಲದಂತೆ ಅಂತ್ಯಕ್ರಿಯೆ ನಡೆಸಿದ್ದಾರೆ. ಪ್ರತಿದಿನ ನಗರದಲ್ಲಿ ಕಾಣಿಸುತ್ತಿದ್ದ ಅನಾಥನಾದ ಬಸ್ಯಾನ ಅಂತಿಮ ಯಾತ್ರೆಯಲ್ಲಿ ಪಟ್ಟಣದ ಬಹುತೇಕ ಜನರು ಪಾಲ್ಗೊಂಡಿದ್ದಾರೆ. ಸದ್ಯ ಬಸ್ಯಾನ ಮೆರವಣಿಗೆ ಅಂತ್ಯಕ್ರಿಯೆ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಬಸ್ಯಾನಿಗೆ ಒಂದು ರೂಪಾಯಿ ನೀಡಿದ್ರೆ ಒಳ್ಳೆಯದಾಗುತ್ತೆ ಎಂಬುವುದು ಅಲ್ಲಿನ ಜನರ ನಂಬಿಕೆಯೂ ಆಗಿತ್ತು.

Edited By : Nirmala Aralikatti
PublicNext

PublicNext

17/11/2021 10:10 pm

Cinque Terre

40.08 K

Cinque Terre

23

ಸಂಬಂಧಿತ ಸುದ್ದಿ