ಕುಣಿಗಲ್: ಇಲ್ಲಿ ಒಂದು ಮದುವೆ ನಡೆದಿದೆ. ಇಡೀ ರಾಜ್ಯದಲ್ಲಿ ಈಗ ಇದೇ ಮದುವೆಯದ್ದೇ ಚರ್ಚೆ. ಕಾರಣ, ವರನ ವಯಸ್ಸು-ವಧುವಿನ ವಯಸ್ಸಿನಲ್ಲಿ ತುಂಬಾ ಅಂತರ ಇದೆ. ಆದರೂ ಮದುವೆ ಆಗಿ ಯುವಕರು ಹುಬ್ಬೇರಿಸೋವಂತೆ ಮಾಡಿದ್ದಾರೆ.
ಮೊನ್ನೆಯಿಂದಲೇ ಈ ಜೋಡಿಯ ಮದುವೆ ಫೋಟೋ ಹೆಚ್ಚು ಗಮನ ಸೆಳೆಯುತ್ತಿದೆ. ಅಷ್ಟೇ ವೈರಲ್ ಕೂಡ ಆಗಿದೆ. ಕಾರಣ ವಧುವಿನ ವಯಸ್ಸು 25 ವರನ ವಯಸ್ಸು 45. ಬರೋಬ್ಬರಿ 20 ವರ್ಷ ಅಂತರ ಇದೆ. ಆದರೂ ಮದುವೆ ಆಗಿದೆ ಈ ಡಿಫರಂಟ್ ಜೋಡಿ.
ಅಂದ್ಹಾಗೆ ವರನ ಹೆಸರು ಶಕರಣ್ಣ. ಇಲ್ಲಿಯ ಅಕ್ಕಿಮರಿಪಾಳ್ಯ ಗ್ರಾಮದವ್ರು. ವಧು ಹೆಸರು ಮೇಘನಾ. ಊರು ಸಂತೇಮಾವತ್ತೂರು. ಆದರೆ ಮೇಘನಾಗೆ ಇದು ಎರಡನೇ ಮದುವೆ. 2 ವರ್ಷದ ಹಿಂದೇನೆ ಪತಿ ಬಿಟ್ಟು ಹೋಗಿದ್ದಾನೆ. ಇನ್ನು ಶಕರಣ್ಣ ಮದುವೇನೆ ಆಗಿದೆ ಉಳಿದಿದ್ದರು. ಈಗ ಇವರು ಪರಸ್ಪರ ಒಪ್ಪಿ ಮದುವೆ ಆಗಿದ್ದಾರೆ. ಇವರ ಮದುವೆ ಸುದ್ದಿ ಕೇಳಿ
ಊರಿನ ಹುಡುಗರು ಹುಬ್ಬೇರಿಸಿದ್ದಾರೆ.
PublicNext
19/10/2021 10:03 pm