ನವದೆಹಲಿ : ಪುಟ್ಟ ಹುಡುಗಿ ಮೊದಲ ಬಾರಿ ದೆಹಲಿಯಿಂದ ವಿಮಾನ ಹತ್ತಿದ್ದಾಳೆ. ತಾನಿದ್ದ ವಿಮಾನದಲ್ಲಿ ಹುಡುಗಿ ಪೈಲಟ್ ಸಮವಸ್ತ್ರದಲ್ಲಿ ತನ್ನ ತಂದೆಯನ್ನು ನೋಡಿ ಖುಷಿ ಪಟ್ಟ ಹುಡುಗಿಯ ಮುದ್ದಾದ ರಿಯಾಕ್ಷನ್ ನೆಟ್ಟಿಗರ ಮನ ಗೆದ್ದಿದೆ. ವೈರಲ್ ಆಗಿರುವ ವಿಡಿಯೋದಲ್ಲಿ, ಹುಡುಗಿಯ ತಂದೆ ಕಾಕ್ ಪಿಟ್ ಬಾಗಿಲ ಬಳಿ ನಿಂತಿದ್ದಾರೆ. ಈ ನಡುವೆ ಪೈಲಟ್, ತಂದೆ ತನ್ನ ಮಗಳ ಕಡೆ ಕೈ ಬೀಸಿದ್ದಾರೆ. ಹುಡುಗಿ ತನ್ನ ತಂದೆಯನ್ನು ನೋಡಿ ಆಶ್ಚರ್ಯಗೊಂಡ ದೃಶ್ಯವನ್ನು ಸೆರೆಯಾಗಿದೆ.
ಹುಡುಗಿಯ ಹೆಸರು ಶನಯಾ ಮೋತಿಹಾರ್ ಎಂದು ತಿಳಿದು ಬಂದಿದೆ. ಇನ್ನು ತಂದೆಯನ್ನು ಕಂಡ ಪುಟ್ಟ ಬಾಲಕಿ ಒಂದೇ ಸಮನೆ ಅಪ್ಪಾ ಎಂದನ್ನುತ್ತಿರುವುದನ್ನು ನೊಡಬಹುದಾಗಿದೆ.
ಈ ವಿಡಿಯೋವನ್ನು ಶನಾಯ ಮೋತಿಹಾರ್ ಅವರ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲಾಗಿದೆ. ವಿಡಿಯೋದ ಶೀರ್ಷಿಕೆಯಲ್ಲಿ 'ಅಪ್ಪನ ಜೊತೆ ನನ್ನ ಮೊದಲ ವಿಮಾನಯಾನ. ಅವರು ನನ್ನನ್ನು ದೆಹಲಿಗೆ ಕರೆದುಕೊಂಡು ಹೋಗುತ್ತಿದ್ದಾರೆ. ನಾನು ಅವನನ್ನು ನೋಡಲು ತುಂಬಾ ಉತ್ಸುಕಳಾಗಿದ್ದೆ. ಇದು ನಾನು ಕಂಡ ಅತ್ಯುತ್ತಮ ವಿಮಾನಯಾನ. ಲವ್ ಯು ಪಾಪಾ ಎಂದು ಬರೆಯಲಾಗಿದೆ".
PublicNext
13/10/2021 06:40 pm